ಕಾಪು: ಕೋಮು ಸಂಘರ್ಷಗಳ ಹಣೆಪಟ್ಟಿ ಕಟ್ಟಿಕೊಂಡ ಕರಾವಳಿ ಭಾಗದಲ್ಲಿ ಇದೀಗ ಕೋಮು ಸೌಹಾರ್ದದ ಸಂದೇಶ ಸಾರುವ ಮಸೀದಿಯ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಅಧ್ಯಕ್ಷತೆಯಲ್ಲಿ ನೋಡ ಬನ್ನಿ ನಮ್ಮ ಮಸೀದಿ ಎಂಬ ಅರ್ಥಪೂರ್ಣ ಕಾರ್ಯಕ್ರಮ ನಡೆದಿದೆ.
ಕಾಪು ತಾಲೂಕಿನ ಮಲ್ಲಾರು ಮಜೂರಿನ ಬದ್ರಿಯಾ ಜುಮ್ಮಾ ಮಸೀದಿಯು ನವೀಕರಣಗೊಂಡಿದ್ದು ಮಸೀದಿಗೆ
ಸರ್ವಧರ್ಮದ ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಧರ್ಮ, ಜಾತಿ ಎಂಬ ಬೇಧವಿಲ್ಲದೆ ಎಲ್ಲರಿಗೂ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಿರುವ ಮೂಲಕ
ಸೌಹಾರ್ದದ ದಿಟ್ಟ ಹೆಜ್ಜೆಯಾಗಿ ಮಸೀದಿ ಮಂಡಳಿ ಮುಂದಾಗಿದೆ.ಇಂಡೋ ಶೈಲಿಯಲ್ಲಿ, ಕಾಷ್ಠ ಕೇತನೆಯ ಸೊಗಡಿನಿಂದ ನಿರ್ಮಾಣಗೊಂಡಿರುವ ಈ ಮಸೀದಿ
ಹೊರಾಂಗಣವಷ್ಟೇ ಅಲ್ಲ, ಒಳಾಂಗಣದ ಅಂದವೂ ಗಮನ ಸೆಳೆಯುತ್ತದೆ.
ಅತ್ಯಾಧುನಿಕ ವಿನ್ಯಾಸ, ಅಪೂರ್ವ ಕೆತ್ತನೆಯ ಮಸೀದಿ ಪ್ರವೇಶ ದ್ವಾರ, ವಿಶಾಲ ಪ್ರಾರ್ಥನಾ ಮಂದಿರ ಹಾಗೂ ಆಕರ್ಷಕವಾಗಿ ರೂಪುಗೊಂಡ ಮಸೀದಿ ಪರಿಸರ ಎಲ್ಲರ ಗಮನ ಸೆಳೆಸುತ್ತಿದೆ.ಕಾರ್ಯಕ್ರಮದಲ್ಲಿ ಮಸೀದಿಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಗಣ್ಯರು ಉದ್ಘಾಟಿಸಿಸಲಾಯಿತು ಹಾಗೂ ವಿವಿಧ ಕಾಮಗಾರಿಗಳಿಗೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
PublicNext
03/02/2026 07:30 pm
LOADING...