ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿಯಲ್ಲಿ ಧೂಮಾವತಿ ಜಾರಂದಾಯ ನೇಮೋತ್ಸವ: ಭಕ್ತಿಭಾವದ ಸಾಗರ!

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಮಾನಂಪಾಡಿಯಲ್ಲಿ ಶ್ರೀ ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ, ಭಾನುವಾರ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಜರುಗಿತು.

ಗಣ್ಯರ ಉಪಸ್ಥಿತಿ

ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಮಾನಂಪಾಡಿ ಮೊಗವೀರ ಸಭಾ, ಹೆಜಮಾಡಿ ಕೋಡಿ ಹತ್ತು ಸಮಸ್ತರು, ಮಾನಂಪಾಡಿ ಮಿತ್ರವೃಂದ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಸೋಮವಾರದ ಕಾರ್ಯಕ್ರಮಗಳು

ಸೋಮವಾರ ಶ್ರೀ ಧೂಮಾವತಿ ದೈವದ ಪಿರಿಬಲಿ ನಡೆದು ಭಂಡಾರ ನಿರ್ಗಮನವಾಗಲಿದೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ಮಾಯಂದಾಲ ದೈವದ ನೇಮೋತ್ಸವ ಜರುಗಲಿದೆ.

Edited By : Manjunath H D
PublicNext

PublicNext

02/02/2026 08:29 am

Cinque Terre

24.14 K

Cinque Terre

0

ಸಂಬಂಧಿತ ಸುದ್ದಿ