ಶಿವಮೊಗ್ಗ : ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹದ ಗೋಡೆಯ ಮೇಲಿಂದ ಅಕ್ರಮವಾಗಿ ಎಸೆಯಲಾಗಿದ್ದ ಕಪ್ಪು ಟೇಪ್ ಸುತ್ತಿದ್ದ ವಸ್ತುಗಳನ್ನು ಪಡೆಯಲು ಯತ್ನಿಸಿದ ಇಬ್ಬರು ವಿಚಾರಣಾಧೀನ ಕೈದಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಕೈದಿಗಳನ್ನು ಮೊಹಮದ್ ಖಲಂದರ್ ಮತ್ತು ಅಬ್ದುಲ್ ಅಸೀಫ್ ಎಂದು ಗುರುತಿಸಲಾಗಿದೆ. ತಪಾಸಣೆ ವೇಳೆ ಮೊಹಮದ್ ಖಲಂದರ್‌ನಿಂದ ಒಂದು ಸ್ಮಾರ್ಟ್‌ಫೋನ್, ಸಿಮ್ ಕಾರ್ಡ್, ಎರಡು ಸಿಗರೇಟ್ ಪ್ಯಾಕೆಟ್ ಹಾಗೂ ಸುಮಾರು 170 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಕೈದಿ ಅಬ್ದುಲ್ ಅಸೀಫ್‌ನಿಂದ 230 ಗ್ರಾಂ ಗಾಂಜಾ ಹಾಗೂ ಲೈಟರ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಕೈದಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.
Kshetra Samachara
02/02/2026 04:51 pm
LOADING...