ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಸಾರ್ವಜನಿಕ ಸಮಾರಂಭವೊಂದರಲ್ಲಿ ತನ್ನ ಜನಿವಾರವನ್ನು ಕತ್ತರಿಸಿ ಹಾಕುವ ಮೂಲಕ ಹಳೆಯ ಸಂಪ್ರದಾಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವಿಡಿಯೋದಲ್ಲಿ, ಯುವಕನು "ನನಗೆ ಯಾವುದೇ ಜಾತಿ ಇಲ್ಲ, ಯಾವುದೇ ಧರ್ಮ ಇಲ್ಲ" ಎಂದು ಘೋಷಿಸಿ, ತನ್ನ ಜನಿವಾರವನ್ನು ಕತ್ತರಿಸಿ ಹಾಕಿದ್ದಾನೆ.
ಯುವಕನು ತನ್ನ ಈ ಕಾರ್ಯಕ್ಕೆ ಕಾರಣ ನೀಡುತ್ತಾ, ಜನಿವಾರ ಧರಿಸುವುದು ಕೇವಲ ಪುರುಷರಿಗೆ ಮಾತ್ರ ಏಕೆ ಸೀಮಿತ? ಮಹಿಳೆಯರಿಗೆ ಇದನ್ನು ಧರಿಸಲು ಯಾಕೆ ಅವಕಾಶವಿಲ್ಲ? ಎಂದು ಪ್ರಶ್ನಿಸಿದ್ದಾನೆ. ಇದು ಕೇವಲ ಜಾತಿ ತಾರತಮ್ಯದ ಸಂಕೇತವಲ್ಲ, ಬದಲಿಗೆ ಪಿತೃಪ್ರಧಾನ ವ್ಯವಸ್ಥೆಯ ಸಂಕೇತವೂ ಹೌದು ಎಂದು ಆತ ತೀವ್ರವಾಗಿ ಟೀಕಿಸಿದ್ದಾನೆ.
ಈ ಯುವಕನ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಜಾತಿ ವಿರೋಧಿ ಹೋರಾಟಗಾರರು ಆತನ ಧೈರ್ಯವನ್ನು ಮೆಚ್ಚಿ, ಇದು ಹಳೆಯ ಬೇರುಗಳನ್ನು ಕಿತ್ತೊಗೆಯುವ ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಇನ್ನೊಂದೆಡೆ, ಹಲವರು ಯುವಕನ ಈ ಕೃತ್ಯವನ್ನು ಕೇವಲ ಪ್ರಚಾರಕ್ಕಾಗಿ ಮಾಡಿದ ನಾಟಕ ಎಂದು ಟೀಕಿಸಿದ್ದಾರೆ. "ಆರ್ಯ ಸಮಾಜದಂತಹ ಸುಧಾರಣಾವಾದಿ ಗುಂಪುಗಳು ಮೊದಲಿನಿಂದಲೂ ಎಲ್ಲರಿಗೂ ಜನಿವಾರ ಧರಿಸಲು ಅವಕಾಶ ನೀಡುತ್ತಿವೆ. ಹೀಗಿರುವಾಗ ಇದನ್ನು ಪ್ರತಿಭಟನೆಯ ಹೆಸರಿನಲ್ಲಿ ಅವಮಾನಿಸುವುದು ತಪ್ಪು" ಎಂಬ ವಾದವೂ ವ್ಯಾಪಕವಾಗಿ ಕೇಳಿಬಂದಿದೆ.
PublicNext
03/02/2026 03:23 pm
LOADING...