ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಗ್ಧ ಮಗುವಿನ ಕೈಯಲ್ಲಿ 10 ರೂ. ನೋಟು : ಇದು ಭಕ್ತಿಯೋ, ಶೋಷಣೆಯೋ?

ಧಾರ್ಮಿಕ ಸ್ಥಳವೊಂದರಲ್ಲಿ ಪುಟ್ಟ ಮಗುವೊಂದು ಕೈಯಲ್ಲಿ 10 ರೂಪಾಯಿ ನೋಟು ಹಿಡಿದುಕೊಂಡು ಭಕ್ತರಿಗೆ ಆಶೀರ್ವಾದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ದೃಶ್ಯ ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಅಚ್ಚರಿ ಮೂಡಿಸಿದ್ದು, ಇದು ಭಕ್ತಿಯೋ ಅಥವಾ ಮಗುವಿನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಆರ್ಥಿಕ ಲಾಭ ಗಳಿಸುವ ಪ್ರಯತ್ನವೋ ಎನ್ನುವ ಚರ್ಚೆ ಶುರುವಾಗಿದೆ.

ಹೌದು ವೈರಲ್ ಆಗಿರುವ ವಿಡಿಯೋದಲ್ಲಿ, ಒಂದು ಪುಟ್ಟ ಮಗುವನ್ನು ಎತ್ತರದ ಜಾಗದಲ್ಲಿ ಶಿವಲಿಂದ ಇದ್ದ ಜಾಗದಲ್ಲಿ ಕೂರಿಸಲಾಗಿದೆ. ಸಾಲಾಗಿ ಬರುತ್ತಿರುವ ಭಕ್ತರು ಮಗುವಿಗೆ ಹಣ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ. ವಿಚಿತ್ರವೆಂದರೆ, ಮಗುವಿನ ಕೈಯಲ್ಲಿ 10 ರೂಪಾಯಿ ನೋಟೊಂದಿದ್ದು, ಅದನ್ನು ಹಿಡಿದುಕೊಂಡೇ ಪ್ರತಿ ಭಕ್ತನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಲು ಮಗುವಿಗೆ ಸೂಚನೆ ನೀಡಿದಂತೆ ಕಾಣುತ್ತಿದೆ.

ಈ ದೃಶ್ಯ ಭಕ್ತಿಗಿಂತ ಹೆಚ್ಚಾಗಿ ಆರ್ಥಿಕ ಲಾಭಕ್ಕಾಗಿ ರೂಪಿಸಿದ ತಂತ್ರದಂತೆ ಕಾಣುತ್ತಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಗುವಿನ ಮುಗ್ಧತೆಯನ್ನು ಹಣ ಸಂಪಾದನೆಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಮುಗ್ಧ ಮಗುವನ್ನು ಹಣ ಸಂಪಾದನೆಯ ಸಾಧನವನ್ನಾಗಿ ಬಳಸಿಕೊಳ್ಳುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ. ಮಗುವನ್ನು ಈ ರೀತಿ ಬಳಸಿಕೊಂಡ ಪೋಷಕರು ಅಥವಾ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕೆಲವರು ಇದನ್ನು ಭಕ್ತಿಯ ದೃಷ್ಟಿಯಿಂದ ನೋಡುತ್ತಿದ್ದರೂ, ಬಹುತೇಕರು ಇದು ಅಂಧಶ್ರದ್ಧೆಯ ಪರಮಾವಧಿ ಮತ್ತು ಮಗುವಿನ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

Edited By : Nirmala Aralikatti
PublicNext

PublicNext

04/02/2026 04:48 pm

Cinque Terre

41.4 K

Cinque Terre

0