ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಜಾತ್ರೋತ್ಸವಗಳು ಮೋಜುವಿನ ವ್ಯವಸ್ಥೆಯಾಗುತ್ತಿರೋದು ವಿಷಾದನೀಯ

ಕೋಡ್ಲಿಪೇಟೆ: ಗ್ರಾಮೀಣ ಸೊಗಡಿನ ಜಾತ್ರೋತ್ಸವಗಳು ಸಂಸ್ಕೃತಿಯ ಮಿಲನವಾಗಿದ್ದ ಪ್ರಸ್ತುತ ದಿನಗಳಲ್ಲಿ ಜಾತ್ರೋತ್ಸವಗಳು ಮೋಜು ಮಸ್ತಿ ಮಾಡುವ ಸ್ಥಳವಾಗುತ್ತಿರುವುದು ಕಳವಳಕಾರಿಯ ವಿಷಯವಾಗಿದೆ’ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ವಿಷಾದಿಸಿದರು.

ಅವರು ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಜಯದೇವ ಜಾತ್ರಾ ಕಲಾ ವೇದಿಕೆಯಲ್ಲಿ 82ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರೋಪ ಕಾರ್ಯಕ್ರಮವನ್ನು ಜಾತ್ರಾ ಮೈದಾನದ ಕಲಾ ವೇದಿಕೆಯಲ್ಲಿ ಉದ್ಘಾಟಿಸಿ ಆಶ್ರೀರ್ವಚಿಸುತ್ತಿದ್ದರು-ಗ್ರಾಮೀಣ ಪ್ರದೇಶದಲ್ಲಿ ಜಾತ್ರೋತ್ಸವಗಳಂತಹ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದು ಗ್ರಾಮೀಣ ಭಾಗದ ರೈತಾಪಿ ಜನರು ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ವರ್ಷಕೊಮ್ಮೆ ರೈತರು ಜಾತ್ರೆಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ ಇಂಥಹ ಜಾತ್ರೆಗಳಲ್ಲಿ ಜನರು, ರೈತರು ಸೇರಿವ ಸಾಂಸ್ಕೃತಿಕ ವ್ಯವಸ್ಥೆಯಾಗಿತ್ತು ಆದರೆ ಇಂದು ಜಾತ್ರೋತ್ಸವಗಳನ್ನು ಮೋಜುವಿನ ವ್ಯವಸ್ಥೆಯನ್ನಾಗಿ ಮಾರ್ಪಾಡಾಗಿರುವುದು ವಿಷಾದನೀಯ ಎಂದರು.

ಜಾತ್ರೆಗಳಲ್ಲಿ ಎಲ್ಲಾ ಜಾತಿ ಜನಾಂಗದವರು ಒಟ್ಟಾಗಿ ಸೇರುವ, ವೈವಿದ್ಯತೆ, ರಥೋತ್ಸವ, ಸಂಸ್ಕೃತಿಯನ್ನು ಸಮ್ಮೀಲನಗೊಳಿಸುವ ಕೇಂದ್ರವಾಗಿದೆ ಆದರೆ ಇಂದು ನಶಿಸುತ್ತಿರುವ ಜಾತ್ರೋತ್ಸವಗಳನ್ನು ಉಳಿಸಲು ಇಂದಿನ ಪೀಳಿಗೆ ಪ್ರಯತ್ನಿಸಿದರೆ ಮಾತ್ರ ಜಾತ್ರೆಯಂತಹ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಜಾತ್ರಾ ಮೈದಾನದಲ್ಲಿ ಮಾರಾಗಿಡಗಳನ್ನು ನೆಡಬೇಕು ಜಾತ್ರೆ ನಸೀಸಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.

Edited By : PublicNext Desk
Kshetra Samachara

Kshetra Samachara

21/02/2026 07:24 am

Cinque Terre

240

Cinque Terre

0

ಸಂಬಂಧಿತ ಸುದ್ದಿ