ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಸಿದ್ದರಾಮಯ್ಯನವರೇ ನಮ್ಮ ಮುಂದಿನ ಸಿಎಂ: ಹೆಚ್.ಸಿ ಮಹದೇವಪ್ಪ

ಮಡಿಕೇರಿ: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನ ಮತ್ತೆ ಮುನ್ನಲೆಗೆ ಬಂದಿದ್ದು ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಸಿದ್ದರಾಮಯ್ಯರೇ ನಮ್ಮ ಮುಂದಿನ ಸಿಎಂ ಎಂದು ಮಡಿಕೇರಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದಲಿತರೇ ಸಿಎಂ ಆಗಬೇಕು ಎಂಬ ಕೂಗು ಇನ್ನೂ ಕೂಡ ಹೈ ಕಮಾಂಡ್ ಗೆ ಮುಟ್ಟಿಲ್ಲ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಖ್ಯಮಂತ್ರಿ ಇರುವುದರಿಂದ ಮುಂದೆ ದಲಿತ ನಾಯಕರು ರಾಜ್ಯದಲ್ಲಿ ಸಿಎಂ ಆಗಬೇಕು.

ಮುಂದಿನ ದಿನಗಳಲ್ಲಿ ದಲಿತ ನಾಯಕರು ಸಿಎಂ ಆಗಬಾರದು ಎಂದು ಏನು ಇಲ್ಲ. ಅದಕ್ಕೆ ಅವಕಾಶಗಳು ಸನ್ನಿವೇಶಗಳು ಬರಬೇಕು ಅಷ್ಟೇ. ಕಾಂಗ್ರೆಸ್ ಹೈಕಮಾಂಡ್ ಇಂದ ಹಿಡಿದು ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರೂ ಸೇರಿ ಸೂಕ್ತವಾದ ದಲಿತ ನಾಯಕರನ್ನು ಕೂರಿಸಬೇಕು.‌

ದಲಿತರು ಹಲವು ವರ್ಷದಿಂದ ಸದಾ ಕಾಂಗ್ರೆಸ್ ನೊಂದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದಲಿತರ ಓಟು ಕೊಟ್ಟು ಅವರ ನಾಯಕರು ಸುಮ್ಮನೆ ಇದು ಬೇರೆ ಅವರು ಮುಖ್ಯಮಂತ್ರಿ ಆಗಬೇಕು ಏನುವುದು ಚರ್ಚೆ ಸರಿಯಲ್ಲ ಎಂದು ಡಿಕೆ ಶಿವಕುಮಾರ್ ಗೆ ಮಹದೇವಪ್ಪ ಟಕ್ಕರ್ ಕೊಟ್ಟಿದ್ದಾರೆ.

ದಲಿತರು ಮುಖ್ಯಮಂತ್ರಿ ಆಗಬೇಕು ಎಂಬುವುದು ಹೈಕಮಾಂಡ್ ಗಮನದಲ್ಲಿಟ್ಟುಕೊಂಡಿದೆ‌ ಹಾಗಾಗಿ ಸಿದ್ದರಾಮಯ್ಯ ಇರುವ ತನಕ ಅವರೇ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ದಲಿತರನ್ನು ಮುಖ್ಯಮಂತ್ರಿಗಳನ್ನ ಮಾಡಬೇಕು. ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಮಡಿಕೇರಿಯಲ್ಲಿ ತಿಳಿಸಿದ್ದಾರೆ.

Edited By : Somashekar
PublicNext

PublicNext

23/02/2026 10:12 am

Cinque Terre

11.86 K

Cinque Terre

0

ಸಂಬಂಧಿತ ಸುದ್ದಿ