ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈಟ್ ವಾಷ್ ಮಾಡಿ ಹಲವು ಕಾಮಗಾರಿಗಳ ಉದ್ಘಾಟನೆ: ರವಿ ಕಾಳಪ್ಪ ಲೇವಡಿ

ಮಡಿಕೇರಿ: ಹಳೆಯ ಕಾಮಗಾರಿಗೆ ವೈಟ್ ವಾಶ್ ಮಾಡಿ ತಮ್ಮ ಹೆಸರು ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು ತಮ್ಮ ಕೆಲಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ರವಿ ಕಾಳಪ್ಪ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿನ ಶಾಸಕರು ಜಿಲ್ಲೆಗೆ ಹತ್ತಾರು ಉಪಯುಕ್ತ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಿದ್ದಾರೆ.

ಆ ಸಂದರ್ಭಗಳಲ್ಲಿ ಅದಕ್ಕೆ ತಮ್ಮ ಹೆಸರನ್ನೇನು ಹಾಕಿ ಕೊಂಡಿಲ್ಲ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ತಾವೇ ಮಾಡಿದ್ದೆಂದು ಹೇಳಿಕೊಳ್ಳುವ ಕಾಂಗ್ರೆಸ್ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಶಾಸಕರ ಆರೋಪಕ್ಕೆ ತಿರುಗೇಟು ನೀಡಿದರು. ಜಿಲ್ಲೆಯಲ್ಲಿ ಪ್ರಸ್ತುತ ನಡೆಸಿರುವ ಹಲವಾರು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅವಧಿಯಲ್ಲಿ ಆರಂಭಗೊಂಡು ಬಹುತೇಕ ಪೂರ್ಣಗೊಂಡಂತದ್ದು. ಕೊನೆಯ ಹಂತದಲ್ಲಿ ಕಾಂಗ್ರೆಸ್ ಕೇವಲ ವೈಟ್ ವಾಷ್ ಮಾಡಿ ಉದ್ಘಾಟಿಸುತ್ತಿರುವುದಾಗಿ ಲೇವಡಿ ಮಾಡಿದರು.

ಕ್ರಮಕ್ಕೆ ಆಗ್ರಹ-ಬಲ್ಲಮಾಟಿಯಲ್ಲಿ ಆಯೋಜಿತ ಹಿಂದೂ ಸಮಾಜೋತ್ಸವ ಸಂದರ್ಭ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ವ್ಯಕ್ತಿ, ಇದೀಗ ಜಾಮೀನಿನ ಮೇರೆ ಹೊರ ಬಂದಿದ್ದು. ಈತ ಮತ್ತೆ ಸಾಮಾಜಿಕ ಜಾಲ ತಾಣದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೆ, ನಾಪೋಕ್ಲು ಸರ್ಕಾರಿ ಶಾಲೆಯ ದಾನಕೊಟ್ಟ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಆರಂಭವಾದ ಸಂದರ್ಭ ಬಿಜೆಪಿ ಪ್ರತಿಭಟಿಸಿ ಅದನ್ನು ಸ್ಥಗಿತಗೊಳಿಸಿದೆ. ಇಲ್ಲಿಯವರೆಗೂ ಸಮಸ್ಯೆ ಬಗೆಹರಿಕೆಗೆ ಸಂಬಂಧಿಸಿದ ಸರ್ವೇ ನಡೆದಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

24/03/2026 07:08 am

Cinque Terre

260

Cinque Terre

0

ಸಂಬಂಧಿತ ಸುದ್ದಿ