ಮಡಿಕೇರಿ: ರಾಜ್ಯದ ಎರಡು ಕ್ಷೇತ್ರದ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಪರ ವಿರೋಧದ ಚರ್ಚೆಯ ನಡುವೆ ಎರಡು ಕ್ಷೇತ್ರ ಕೂಡ ಕಾಂಗ್ರೆಸ್ ಪಾಲಾಗುತ್ತೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಶಾಸಕ ಎರಡೂ ಕೂಡ ಕಾಂಗ್ರೆಸ್ ಪಕ್ಷದ ಕ್ಷೇತ್ರ ಉಪಚುನಾವಣೆ ಅಂದ್ರೆ ಸಾಧಾರಣವಾಗಿ ಸರಕಾರದ ಪರ ಇರುತ್ತದೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ದೊಡ್ಡ ಬಹುಮತದ ಗೆಲುವು ಸಾದಿಸಲಿದೆ. ಪರ ವಿರೋಧದ ಮಾತು ಕೇಳಿ ಬಂದ್ರು ಕೂಡ ಸಧ್ಯಕ್ಕೆ ಕ್ಷೇತ್ರದಲ್ಲಿ ಯಾವುದೇ ಭಿನ್ನಮತ ಇಲ್ಲ ಪಕ್ಷದಲ್ಲಿ ಆಯಾ ಕುಟುಂಬದವರಿಗೆ ಟಿಕೆಟ್ ನೀಡುವುದು ಸಂಪ್ರದಾಯ ಅದರಂತೆ ಮೇಟಿ ಹಾಗೂ ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ನೀಡಲಾಗಿದು ಎಲ್ಲರೂ ಕೂಡ ಸಹಕಾರ ನೀಡಲಿದ್ದಾರೆಂದುಮಡಿಕೇರಿಯಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
PublicNext
01/04/2026 07:04 am
LOADING...