ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೆ ವಾನವ ಸಂಘರ್ಷ ತಡೆಗೆ ಕಂದಕಗಳನ್ನ ಸರಿ ಪಡಿಸಿ : ಅಪ್ಪಚ್ಚು ರಂಜನ್

ಮಡಿಕೇರಿ: ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ಹೆಚ್ಚಾಗಿದ್ದು ಆನೆ ಮಾನವ ಸಂಘರ್ಷ ತಡೆಗೆ ಕಾಡಂಚಲ್ಲಿನ ಕಂದಕಗಳನ್ನು ದುರಸ್ತಿ ಪಡಿಸುವಂತೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪಚ್ಚು ರಂಜನ್ , ಬಿಜೆಪಿ ಅವಧಿಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಇದ್ದ ಕಂದಕಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿತ್ತು. ಇಂದು ಆ ಕಾರ್ಯ ನಡೆಯದಿರುವುದು ಕಾಡಾನೆ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ. ಅಂದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ 1500 ಕೋಟಿ ರೂ. ವೆಚ್ಚದ ಯೋಜನೆಯ ನೀಲ ನಕಾಶೆ ತಯಾರಿಸಲಾಗಿತ್ತು. ಅದನ್ನು ಅನುಸರಿಸಿ ಕಾರ್ಯಯೋಜನೆ ರೂಪಿಸಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತೆಂದು ಅಭಿಪ್ರಾಯಿಸಿದರು.

Edited By : PublicNext Desk
Kshetra Samachara

Kshetra Samachara

24/03/2026 06:52 am

Cinque Terre

260

Cinque Terre

0

ಸಂಬಂಧಿತ ಸುದ್ದಿ