ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಾಳೆ 17ನೇ ಬಾರಿಗೆ ದಾಖಲೆಯ ರಾಜ್ಯ ಮುಂಗಡ ಪತ್ರವನ್ನು ಮಂಡನೆ ಮಾಡಲಿದ್ದು, ಮೈಸೂರಿನ ಸಿಎಂ ಅಭಿಮಾನಿಯೋರ್ವ ರಸ್ತೆಯೊಂದರ ನಡುವೆ ಸಿಎಂ ಅವರ ಬೃಹದಾಕಾರದ ರಂಗೋಲಿಯನ್ನು ಬಿಡಿಸಿರೋದು ಎಲ್ಲರ ಕಣ್ಮನ ಸೆಳೆಯುತ್ತಿದೆ!
ಅಂದಹಾಗೆ, ಇದು ಎಂಟು ಸಾವಿರ ಚದರ ಅಡಿಯಷ್ಟು ದೊಡ್ಡದಾದ ರಂಗೋಲಿ ಚಿತ್ರ! ಸುಂದರವಾದ ಈ ರಂಗೋಲಿಯನ್ನು ಬಿಡಿಸಿದವರು ಪುನೀತ್ ಎಂಬ ಸ್ಥಳೀಯ ಕಲಾವಿದ!
ಕರ್ನಾಟಕದ ಭೂಪಟದಲ್ಲಿ ಬಜೆಟ್ ನ ಸೂಟ್ ಕೇಸ್ ಅನ್ನು ಹಿಡಿದುಕೊಂಡು ನಿಂತಿರೋ ಸಿಎಂ ಸಿದ್ದರಾಮಯ್ಯ ಅವರ ರಂಗೋಲಿ ಭಾವಚಿತ್ರವನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಬಿಡಿಸಲಾಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
PublicNext
05/03/2026 08:09 pm
LOADING...