ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈಕಮಾಂಡ್ ಅಧಿಕಾರ ಬಿಡಿ ಅಂದರೆ ಬಿಡ್ತೀನಿ, ಮುಂದುವರೀರಿ ಅಂದರೆ ಮುಂದುವರಿತೀನಿ..

ಮೈಸೂರು: ನಮ್ಮ ಹೈಕಮಾಂಡ್ ಅವಕಾಶ ಒದಗಿಸಿಕೊಟ್ಟರೆ ಮುಂದಿನ ಎರಡು ಬಜೆಟ್ ಗಳನ್ನು ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಡಿಕೆಶಿ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ. ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರೋ ಡಿಸಿಎಂ ಡಿಕೆಶಿ ಅವರ ಪಾಲಿಗೆ ಅಧಿಕಾರ ಹಸ್ತಾಂತರ ಎಂಬುದು ದಿನೇ ದಿನೇ ಕಗ್ಗಂಟಾಗುತ್ತಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜಕೀಯ ಮಹತ್ವವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ತಮ್ಮ ತವರು ಜಿಲ್ಲೆ ಮೈಸೂರು ಪ್ರವಾಸದಲ್ಲಿರೋ ಸಿಎಂ ಇಂದು ವರುಣಾ ಕ್ಷೇತ್ರದ ಪಿಲ್ಲಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನನಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಡಿ ಎಂದರೆ ಬಿಡುವೆನು. ಇಲ್ಲ ನೀವೇ ಮುಂದುವರಿಯಿರಿ ಅಂತಾ ಹೇಳಿದರೆ ನಾನೇ ಮುಂದುವರಿತೀನಿ ಎಂದರು.

Edited By : Vinayak Patil
PublicNext

PublicNext

07/03/2026 08:29 pm

Cinque Terre

21.74 K

Cinque Terre

3