ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಲೋಕಾಯುಕ್ತ ಬಲೆಯಲ್ಲಿ ಎಂಜಿನಿಯರ್ ಸತ್ಯನಾರಾಯಣ; ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ!

ಹಾಸನ: ನಗರಸಭೆ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 6.82 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಆದಾಯಕ್ಕಿಂತ 200.74% ರಷ್ಟು ಹೆಚ್ಚಿನ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಧಿಕಾರಿಗಳು 3 ಭವ್ಯ ಬಂಗಲೆಗಳು (ಅಂದಾಜು ಮೌಲ್ಯ ₹5.30 ಕೋಟಿ), 6 ಸೈಟ್‌ಗಳು ಹಾಗೂ 3 ಎಕರೆ 33 ಗುಂಟೆ ಕೃಷಿ ಭೂಮಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆಯಲ್ಲಿ 1 ಕೆಜಿ 36 ಗ್ರಾಂ ಚಿನ್ನ, 11 ಕೆಜಿ ಬೆಳ್ಳಿ, ₹15.75 ಲಕ್ಷ ನಗದು ಹಾಗೂ ₹22 ಲಕ್ಷ ಮೌಲ್ಯದ ಎರಡು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ದಾಳಿ ವೇಳೆ ಎರಡು ರಹಸ್ಯ ಬ್ಯಾಂಕ್ ಲಾಕರ್‌ಗಳು ಪತ್ತೆಯಾಗಿದ್ದು, ಇವುಗಳ ತಪಾಸಣೆಯಿಂದ ಮತ್ತಷ್ಟು ಆಸ್ತಿ ವಿವರ ಹೊರ ಬರುವ ಸಾಧ್ಯತೆಯಿದೆ.

ದಾಳಿಯ ವೇಳೆ ಎಂಜಿನಿಯರ್ ಸತ್ಯನಾರಾಯಣ ಅವರು ಸುಮಾರು ಒಂದೂವರೆ ಗಂಟೆ ಕಾಲ ಮನೆಯ ಬಾಗಿಲು ತೆರೆಯದೆ ಅಧಿಕಾರಿಗಳನ್ನು ಹೊರಗೇ ಕಾಯಿಸುವ ಮೂಲಕ ಅಸಹಕಾರ ತೋರಿದ್ದರು.

ಅಂತಿಮವಾಗಿ ಒಳ ಪ್ರವೇಶಿಸಿದ ಅಧಿಕಾರಿಗಳು ಲಭ್ಯವಿದ್ದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜಪ್ತಿ ಮಾಡಿದ್ದಾರೆ.

ಈಗಾಗಲೇ ಎಂಜಿನಿಯರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Edited By : Manjunath H D
PublicNext

PublicNext

06/03/2026 08:31 am

Cinque Terre

12.79 K

Cinque Terre

0

ಸಂಬಂಧಿತ ಸುದ್ದಿ