ಕಾಗವಾಡ: ವಿಜ್ಞಾನ ಮತ್ತು ತಂತ್ರಜ್ಞಾನ ಮುಗಿಲೆತ್ತರಕ್ಕೆ ಬೆಳೆದಿರುವ ಈ ಕಾಲದಲ್ಲೂ, ಕೆಲವು ಘಟನೆಗಳು ತರ್ಕಕ್ಕೆ ನಿಲುಕದೆ ಅಚ್ಚರಿ ಮೂಡಿಸುತ್ತಿವೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಘಟನೆಯೊಂದು ಈಗ ಇಡೀ ಊರನ್ನೇ ದಂಗಾಗಿಸಿದೆ.
ಕೌಲಗುಡ್ಡ ಗ್ರಾಮದ ಹೊರವಲಯದ ತೋಟದಲ್ಲಿ ವಾಸವಿರುವ ಈಶ್ವರ ತೆಗ್ಗಿನ್ನವರ ಎಂಬುವವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಗೂಢವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮನೆಯ ಒಳಗಿರಲಿ ಅಥವಾ ಸುತ್ತಮುತ್ತಲಿರಲಿ, ಯಾವುದೇ ಕಾರಣವಿಲ್ಲದೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಮನೆಯವರಲ್ಲಿ ಆತಂಕ ಮೂಡಿಸಿದೆ.
ಒಂದೆರಡು ಬಾರಿ ಸಂಭವಿಸಿದ್ದರೆ ಆಕಸ್ಮಿಕ ಎನ್ನಬಹುದಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ಇದು ಕೇವಲ ಕಾಕತಾಳೀಯವೋ ಅಥವಾ ಇದರ ಹಿಂದೆ 'ಬಾನಾಮತಿ' (ಮಾಟ-ಮಂತ್ರ) ಶಕ್ತಿಗಳ ಕೈವಾಡವಿದೆಯೋ ಎನ್ನುವ ಚರ್ಚೆ ಗ್ರಾಮದಲ್ಲಿ ಜೋರಾಗಿ ನಡೆಯುತ್ತಿದೆ.
ಡಿಜಿಟಲ್ ಯುಗದಲ್ಲಿ ಇಂತಹ ಘಟನೆಗಳು ನಂಬಲು ಅಸಾಧ್ಯವೆನಿಸಿದರೂ, ಪ್ರತ್ಯಕ್ಷದರ್ಶಿಗಳ ಕಣ್ಣ ಮುಂದೆಯೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ವೈಜ್ಞಾನಿಕ ತನಿಖೆಯ ಅಗತ್ಯವಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಒಂದು ಪ್ರತ್ಯಕ್ಷ
ವರದಿ ನಮ್ಮ ಪ್ರತಿನಿಧಿ ಲಕ್ಷ್ಮಣ ಕೋಳಿ ಅವರಿಂದ.
PublicNext
08/03/2026 12:56 pm
LOADING...