ಬೆಳಗಾವಿ : ಐತಿಹಾಸಿಕ ಶಿಲಾಶಾಸನವನ್ನು 11ವರ್ಷದ ಬಾಲಕಿ ಪತ್ತೆಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿಯ ಹನುಮಂತನ ದೇವಸ್ಥಾನದಲ್ಲಿ ಬಳಿ ನಡೆದಿದೆ.
ಬೆಳವಡಿ ಮಲ್ಲಮ್ಮಳಿಗೆ ಸಂಬಂಧಿಸಿದ ಶಿಲಾಶಾಸನ ತಂದೆಯೊಂದಿಗೆ ಗ್ರಾಮದ ಹನುಮಂತನ ದೇವಸ್ಥಾನಕ್ಕೆ ಹೋಗಿದ್ದ 11 ವರ್ಷದ ಲಕ್ಷ್ಮೀ ಹುಂಬಿ ಕಲ್ಲಿನಲ್ಲಿ ಕೆತ್ತಿದ ಬೆಳವಡಿ ಮಲ್ಲಮ್ಮ ಶಿಲಾಶಾಸನ ಪತ್ತೆ ಹಚ್ಚಿದ್ದಾಳೆ.
ಬೆಳವಡಿ ಮಲ್ಲಮ್ಮ ಗೋವುಗಳನ್ನು ಬಿಡಿಸಿಕೊಂಡು ಬರುವ ಮೂರ್ತಿ ಕೆತ್ತಿದ ದೃಶ್ಯಗಳು ತಂದೆಗೆ ತೋರಿಸಿದ್ದಾಳೆ. ಛತ್ರಪತಿ ಶಿವಾಜಿ ಮಹಾರಾಜರ ಸೈನಿಕರು ಬೆಳವಡಿ ಮಲ್ಲಮ್ಮನ ಗೋವು ಓಡಿಸಿಕೊಂಡು ಹೋಗುತ್ತಿರುತ್ತಾರೆ. ಅವುಗಳನ್ನು ಮರಳಿ ತರುವ ಮೂರ್ತಿಯನ್ನ ಕೆತ್ತನೆ ಮಾಡಲಾಗಿದೆ. ಆದರೆ ಗ್ರಾಮದ ಜನರು ಈವರೆಗೂ ಶನಿದೇವರು ಎಂದು ಪೂಜೆ ಸಲ್ಲಿಸುತ್ತಿದ್ದರು. ಐತಿಹಾಸಿಕ ಶಿಲಾಶಾಸನ ಗುರುತಿಸಿದ್ದಕ್ಕಾಗಿ ಪುಟ್ಟ ಬಾಲಕಿಗೆ ಗ್ರಾಮಸ್ಥರ ಸನ್ಮಾನಿಸಿ ಗೌರವಿಸಿದ್ದಾರೆ.
PublicNext
09/03/2026 02:29 pm
LOADING...