ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಅಂತರ್ಜಾತಿ ವಿವಾಹದ ಜಗಳ : ಒಬ್ಬರಿಗೆ ಗಂಭೀರ ಗಾಯ, ಗ್ರಾಮದಲ್ಲಿ ಬಿಗುವಿನ ವಾತಾವರಣ

ಕೊಪ್ಪಳ: ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ ಆಗಿದ್ದು ವ್ಯಕ್ತಿಯೊಬ್ಬನಿಗೆ ಗಂಭೀರ ಗಾಯವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಕನೂರು ತಾಲೂಕಿನ ಬಳಗೇರಿಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಬಾರಕೇರ್ ಸಮುದಾಯಕ್ಕೆ ಸೇರಿದ ಯುವತಿ ಪರಸ್ಪರ ಪ್ರೀತಿಸಿ ಮೂರ್ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

ಯುವತಿಯ ಸಂಬಂಧಿಕರು ಗದಗ್ ಜಿಲ್ಲೆಯ ರೋಣ ತಾಲೂಕಿನ ಶಾಂತಿಗಿರಿ–ಇಟಗಿ ಗ್ರಾಮದವರಾಗಿದ್ದು, ಮದುವೆಯ ವಿಷಯ ತಿಳಿದ ನಂತರ ಬಳಗೇರಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಳಗೇರಿ ಗ್ರಾಮದ ಗ್ಯಾರೇಜ್ ಸಮೀಪ ನಡೆದ ಜಗಳದಲ್ಲಿ ಬಸಪ್ಪ ತಳವಾರ್ (69) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.ಇಲ್ಲಿಯವರೆಗೂ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ.

Edited By :
PublicNext

PublicNext

09/03/2026 08:02 pm

Cinque Terre

9.87 K

Cinque Terre

0