ಕೊಪ್ಪಳ: ಜಿಲ್ಲೆಯ ಮಾಜಿ ಸೈನಿಕರ ಬಹುದಿನಗಳ ಬೇಡಿಕೆಯಾಗಿದ್ದ ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ಕೊಪ್ಪಳದಲ್ಲಿ ಸಿದ್ಧತೆಗಳು ನಡೆದಿವೆ.
ಚುಕ್ಕನಕಲ್ಲು ಬಳಿ 2 ಎಕರೆ ಭೂಮಿಯನ್ನು ತಾಲೂಕಾಡಳಿತದಿಂದ ಮಂಜೂರು ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘದಿಂದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯುಗಾದಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
Kshetra Samachara
19/03/2026 07:50 pm
LOADING...