ಚಿಕ್ಕೋಡಿ: ಭಾರತದ ಮೇಲೆ ಪರಕೀಯರು ನಿರಂತರವಾಗಿ ಸಾವಿರಕ್ಕಿಂತ ಹೆಚ್ಚು ವರ್ಷಗಳ ಕಾಲ ದಾಳಿ ಮಾಡಿದರೂ, ನೂರು ಕೋಟಿಗಿಂತ ಹೆಚ್ಚು ಜನರಲ್ಲಿ ನಮ್ಮ ಸಂಸ್ಕೃತಿ-ಪರಂಪರೆಯ ಆಚರಣೆ ಉಳಿದಿರುವುದು ಮಹಿಳೆಯರಿಂದ
ಮಹಿಳೆಯರು ತೊಟ್ಟ ಬಿಂದಿಗೆಯಿಂದ,ಬಳೆಯಿಂದ ನಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಬೆಂಗಳೂರಿನ ಖ್ಯಾತ ಭಾಷಣಗಾರ್ತಿ, ಲೇಖಕಿ ಹಾರಿಕಾ ಮಂಜುನಾಥ ಹೇಳಿದರು.
ಅವರು ಚಿಕ್ಕೋಡಿ ಪಟ್ಟಣದ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಪಾಟೀಲ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ತನ್ನ ಮೇಲೆ ಹಾಗೂ ತನ್ನ ಕೋಟೆಯ ಮೇಲೆ ಪರಕೀಯರ ದಾಳಿ ಆಗುವ ಸಂದರ್ಭದಲ್ಲಿ ಕೈಯಲ್ಲಿ ಖಡ್ಗ ಹಿಡಿದು ಕೆಚ್ಚೆದೆಯಿಂದ ಹೋರಾಡಿ ತಮ್ಮ ಸಂಸ್ಥಾನವನ್ನು ಉಳಿಸಿಕೊಂಡ ಕಿತ್ತೂರಿನ ರಾಣಿ ಚೆನ್ನಮ್ಮ, ಒನಕೆ ಓಬವ್ವ,ತಾರಾಬಾಯಿ,ಕೆಳದಿ ಚೆನ್ನಮ್ಮ,ಬೆಳವಡಿ ಮಲ್ಲಮ್ಮ ಸೇರಿದಂತೆ ವಿವಿಧ ಮಹಿಳೆಯರು ನಮ್ಮ ಭಾರತದ ಪರಂಪರೆ.
ಭಾರತೀಯ ಪರಂಪರೆ ವಿದೇಶಗಳ ಪರಂಪರೆಗೆ ಹೊಂದಾಣಿಕೆ ಮಾಡಿಕೊಂಡಾಗ ಭಾರತೀಯ ಪರಂಪರೆಯು ಅತ್ಯಂತ ಶ್ರೇಷ್ಠವಾದದ್ದು.
ಸದ್ಯ ಭಾರತೀಯ ಹೆಣ್ಣುಮಕ್ಕಳು ಮದುವೆಗೆ,ಅಡುಗೆ ಮನೆಗೆ,ಮನೆ ಬಾಗಿಲಿಗೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಪ್ರವೃತ್ತವಾಗಿರುವುದು ನಮ್ಮ ಪರಂಪರೆ. ಸಮಾಜವನ್ನು ಮುಂದುವರಿಸುವ ಗೃಹಿಣಿ,ಆರ್ಥಿಕ ಬೆಂಬಲ ನೋಡಿಕೊಳ್ಳುವ ಮಹಿಳೆ ಹೀಗೆ ವೇದಗಳಲ್ಲಿ ಮಹಿಳೆಯರನ್ನು ವಿವಿಧ ರೀತಿಯಾಗಿ ಹಾಡಿ ಹೊಗಳಲಾಗಿದೆ.
ಈ ಸಂದರ್ಭದಲ್ಲಿ ತೃಪ್ತಿ ಎಸ ಕುಲಕರ್ಣಿ,ಭಾಗ್ಯಶ್ರೀ ಕುಲಕರ್ಣಿ, ಶೋಭಾ ಮಾಂಜ್ರೇಕರ,ನೀಲಮ್ ಅಡಕೆ,ಕೀರ್ತಿ ಕುಲಕರ್ಣಿ,ಸ್ವಾತಿ ದೇಶಪಾಂಡೆ, ರೇಖಾ ಕುಲಕರ್ಣಿ,ಗಾಯತ್ರಿ ಪಡಲಿ,ಗೌರಿ ಮಾಂಜ್ರೇಕರ,ಡಾ! ಎಸ್.ಸಿ.ಜಕಾತೆ,ಶೃತಿ ಪಾಟೀಲ,ಪೂಜಾ ಬಾನಕಾರ್,ತೃಪ್ತಿ ಎಸ್ ,ಉಮಾ ಪತ್ತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
PublicNext
11/03/2026 08:22 pm
LOADING...