ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಶೇಷ ಭೂಸ್ವಾಧೀನ ಇಲಾಖೆ ವ್ಯವಸ್ಥಾಪಕಿ ಬಿ.ಶೃತಿ ವರ್ಗಾವಣೆ ಮಾಡಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಶೃತಿ ರವರು ಕ್ರಿಮಿನಲ್ ಸ್ವರೂಪದ ಅಪರಾಧ ಪ್ರಕರಣ ಎದುರಿಸುತ್ತಿದ್ದು, ಇಲಾಖಾ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಮಾತೃ ಇಲಾಖೆಯಾದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ಹಿಂದಿರುಗುವಂತೆ ಸರ್ಕಾರ ಆದೇಶಿಸಿತ್ತು.
ಆದರೆ ಬಾಕಿ ಇರುವ ಸರ್ಕಾರಿ ಕೆಲಸಗಳನ್ನ ಪೂರೈಸುವ ದೃಷ್ಟಿಯಿಂದ ಎಂಡಿಎ ಶೃತಿ ರವರನ್ನ ಬಿಡುಗಡೆ ಮಾಡದೆ ಉಳಿಸಿಕೊಂಡಿತ್ತು. ಆದರೆ ಪ್ರಕರಣದ ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಶೃತಿ ರವರನ್ನ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಆದೇಶಿಸಿದೆ.
ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಆದೇಶ ಪತ್ರ ರವಾನೆಯಾಗಿ 5 ದಿನ ಕಳೆದರೂ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ.ಸದ್ಯ ಎಂಡಿಎ ಆಯುಕ್ತರಿಗೆ ಪತ್ರ ಬರೆದಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಶೃತಿ ರವರನ್ನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ.
PublicNext
11/03/2026 10:14 pm
LOADING...