ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕೊಪ್ಪಳ ರೈಲು ಸಮಸ್ಯೆಗಳ ಪರಿಹಾರಕ್ಕೆ 30 ದಿನ ಗಡುವು: ನಾಗರಿಕ ವೇದಿಕೆ ಆಗ್ರಹ

ಕೊಪ್ಪಳ: ಕೊಪ್ಪಳ ರೈಲು ನಿಲ್ದಾಣದಿಂದ ನಿತ್ಯ ಸರಕು ಸಾಗಾಟದ ಲಾರಿಗಳು ಓಡಾಟ ಮಾಡುತ್ತಿದ್ದು ನಾಗರಿಕರಿಗೆ ತೊಂದರೆಯಾಗಿದೆ. ಭಾಗ್ಯನಗರ ಸೇರಿ ವಿವಿಧ ಗ್ರಾಮಗಳಿಂದ ಸಂಚರಿಸುವ ನಾಗರಿಕರು ಲಾರಿಗಳು ಓಡಾಟದಿಂದ ಸಂಚಾರಕ್ಕೆ ಅಡ್ಡಿ ಜೊತೆಗೆ ರಸ್ತೆ ಗುಂಡಿಗಳು ಬಿದ್ದಿವೆ.

ಇದರಿಂದಾಗಿ ರೈಲು ವ್ಯಾಗನ್ ನಿಲುಗಡೆ ಸ್ಥಳ ಬದಲಾವಣೆ ಮಾಡಬೇಕು. ಕೊಪ್ಪಳ ರೈಲು ನಿಲ್ದಾಣದಲ್ಲಿ ಎರಡನೆಯ ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ಕೌಂಟರ್ ಆರಂಭಿಸಬೇಕು.

ಎಸ್ಕೆಲೇಟರ್ ಕಾರ್ಯಾರಂಭ ಮಾಡಬೇಕೆಂದು ಆಗ್ರಹಿಸಿ ಭಾಗ್ಯನಗರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ. ಎಸ್ಪಿ.‌ಆರ್ ಟಿಒ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 30 ದಿನಗಳೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Edited By :
PublicNext

PublicNext

11/03/2026 10:40 pm

Cinque Terre

13.95 K

Cinque Terre

0