ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಶ ಪಡಿಸಿಕೊಂಡಿರುವ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟು ಕೊಡುತ್ತಾರೆ ಎಂಬ ಅಭಿಪ್ರಾಯ ಕೊಪ್ಪಳದಲ್ಲಿ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಕೆರೆಯ ಮುಂದೆ ನಿರ್ಮಿಸಿದ ದ್ವಾರವನ್ನು ಬಂದ್ ಮಾಡಿ ಬೇರೆ ಕಡೆ ಸಂಚರಿಸಲು ದಾರಿ ಮಾಡಿಕೊಳ್ಳುತ್ತಿರುವ ಚಿತ್ರಣ ಕಂಡು ಬಂದಿದೆ. ಬಸಾಪುರ ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡಬೇಕೆಂದು ನ್ಯಾಯಾಲಯದ ಆದೇಶವಿದ್ದರೂ ಕಾರ್ಖಾನೆ ಸಾರ್ವಜನಿಕರಿಗೆ ನಿರ್ಬಂಧಿಸಿತ್ತು. ಕಳೆದ ವರ್ಷ ರೈತರು ಕೆರೆ ದನಗಳನ್ನು ನುಗ್ಗಿ ಪ್ರತಿಭಟನೆ ನಡೆಸಿದ್ದರು. ಈಗಲೂ ಹೋರಾಟ ನಡೆಯುತ್ತಿದೆ. ಈ ಹೋರಾಟದ ಮಧ್ಯೆ ಬಿಎಸ್ಪಿಎಲ್ ಕಾರ್ಖಾನೆಯವರ ನಡೆ ಕುತೂಹಲ ಮೂಡಿಸಿದೆ.
PublicNext
07/03/2026 10:16 am
LOADING...