ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಡಾ.ರಾಜ್‌ ಹುಟ್ಟೂರಿನಲ್ಲಿ ಶಿವಣ್ಣನ ಭಾವುಕ ನಮನ - ಅಣ್ಣಾವ್ರ ನೆನಪಿಗೆ ವೃತ್ತ ಲೋಕಾರ್ಪಣೆ!

ಚಾಮರಾಜನಗರ: ನಟ ಶಿವರಾಜ್‌ಕುಮಾರ್ ಅವರು, ತಮ್ಮ ತಂದೆ ಡಾ.ರಾಜ್‌ಕುಮಾರ್ ಅವರ ಹುಟ್ಟೂರು, ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರಿನಲ್ಲಿ 'ಡಾ.ರಾಜ್‌ಕುಮಾರ್ ವೃತ್ತ'ವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಅವರು ತಮ್ಮ ತವರಿನ ಮೇಲಿನ ಪ್ರೀತಿ ಮತ್ತು ತಂದೆಯ ನೆನಪಿಗೆ ವಿಶೇಷ ಗೌರವ ಸಲ್ಲಿಸಿದರು.

ಅಣ್ಣಾವ್ರ ನೆನಪುಗಳ ಮೆಲುಕು

ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ತಂಡದೊಂದಿಗೆ ದೊಡ್ಡ ಗಾಜನೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಅಣ್ಣಾವ್ರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಅಣ್ಣಾವ್ರ ನೆಚ್ಚಿನ ತಾಣವಾಗಿದ್ದ ದೊಡ್ಡ ಆಲದ ಮರದ ಬಳಿ ಶಿವಣ್ಣ ದಂಪತಿ ಕೆಲಹೊತ್ತು ಕುಳಿತು ಫೋಟೋಗಳಿಗೆ ಪೋಸ್ ನೀಡಿದರು.

ತವರಿನ ಹಬ್ಬದಲ್ಲಿ ಶಿವಣ್ಣ

ಗ್ರಾಮದ ಹಳೆಯ ಮನೆ ಹಾಗೂ ಮಂಟೇಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ ಶಿವಣ್ಣ ದಂಪತಿ, ಅಲ್ಲಿ ನಡೆಯುತ್ತಿದ್ದ ಊರಹಬ್ಬದಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ತವರಿನ ಮೇಲಿನ ಪ್ರೀತಿ ಮತ್ತು ಗೌರವವನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು.

ಅಭಿಮಾನಿಗಳ ಸಾಗರ

ಶಿವಣ್ಣ ಊರಿಗೆ ಆಗಮಿಸಿದ ವಿಷಯ ತಿಳಿದು ಚಾಮರಾಜನಗರ ಹಾಗೂ ಸುತ್ತಮುತ್ತಲಿನಿಂದ ನೂರಾರು ಅಭಿಮಾನಿಗಳು ಧಾವಿಸಿ ಬಂದರು. ತಮ್ಮ ನೆಚ್ಚಿನ ನಟನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು.

Edited By : PublicNext Desk
PublicNext

PublicNext

12/03/2026 04:34 pm

Cinque Terre

3.5 K

Cinque Terre

0