ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ 3-4 ದಶಕಗಳಿಂದ ನಡೆಸಲಾಗುತ್ತಿರುವ ಬಣ್ಣದ ಓಕುಳಿ ಹಬ್ಬದಲ್ಲಿ ಹುಲಿ, ಕರಡಿ, ಜೋಕರ್‌ಗಳು ಮತ್ತು ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ.
ವರ್ಷದೊಡಕಿನ ಮಾರನೇ ದಿನವಾದ ಶನಿವಾರ, ಕರಡಿ ವೇಷಧಾರಿಗಳು ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಗೆಜ್ಜೆಗಳನ್ನು ಕಟ್ಟಿಕೊಂಡರೆ, ಹುಲಿ ವೇಷಧಾರಿಗಳು ಹಳದಿ-ಕಪ್ಪು ಬಣ್ಣದ ಪಟ್ಟೆಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು.
ನವ ವಸಂತದ ಆರಂಭವನ್ನು ಬೊಮ್ಮಲಾಪುರದ ಯುವಜನತೆ ಬಣ್ಣದ ಓಕುಳಿಯಲ್ಲಿ ಸಂಭ್ರಮದಿಂದ ಸ್ವಾಗತಿಸಿದರು.
Kshetra Samachara
21/03/2026 09:38 pm
LOADING...