ಚಿತ್ರದುರ್ಗ: ಗ್ಯಾಸ್ ಪೂರೈಕೆ ಆಗದ ಹಿನ್ನೆಲೆ ಚಿತ್ರದುರ್ಗ ನಗರದ ಹೋಟೆಲ್ಗಳಲ್ಲಿ ಕಟ್ಟಿಗೆ ಒಲೆಯ ಮೂಲಕ ಅಡುಗೆ ತಯಾರಿ ನಡೆಸುತ್ತಿರುವಂತ ದೃಶ್ಯ ಕಂಡುಬಂದಿದೆ.
ಹೌದು ಚಿತ್ರದುರ್ಗ ನಗರದ ಪ್ರೆಸ್ ಕ್ಯಾಂಟೀನ್ ಹೋಟೆಲ್ ನಲ್ಲಿ ಕಟ್ಟಿಗೆ ಒಲೆಯ ಮುಖಾಂತರ ಅಡುಗೆ ತಯಾರಿ ನಡೆಸುತ್ತಿದ್ದಾರೆ, ಚಿತ್ರದುರ್ಗ ನಗರಕ್ಕೆ ಗ್ಯಾಸ್ ಪೂರೈಕೆ ಆಗದೆ ಹಿನ್ನೆಲೆಯಲ್ಲಿ ಹೋಟೆಲ್ಗೆ ಬರುವಂತಹ ಗ್ರಾಹಕರನ್ನು ಕಳೆದುಕೊಳ್ಳದ ಪರಿಸ್ಥಿತಿಯ ನಡುವೆ ಕಟ್ಟಿಗೆ ಒಲೆಯಿಂದಲೇ ಅಡುಗೆಯನ್ನ ತಯಾರು ಮಾಡುತ್ತಿದ್ದಾರೆ.
ದಿನನಿತ್ಯ ಹೋಟೆಲ್ಗಳನ್ನು ನಂಬಿಕೊಂಡು ಸಾರ್ವಜನಿಕರು ತಿಂಡಿ ಹಾಗೂ ಊಟಕ್ಕೆ ಬರುತ್ತಾರೆ ಆದರೆ ಅವರಿಗೆ ನಾವು ಸರಿಯಾದ ಸೇವೆ ಕೊಡುವುದು ಹೋಟೆಲ್ ಮಾಲೀಕರ ಕರ್ತವ್ಯ ಆದ್ದರಿಂದ ಗ್ಯಾಸ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕಟ್ಟಿಗೆ ಒಲೆಯಿಂದಲೇ ತಿಂಡಿ ಊಟಗಳನ್ನು ತಯಾರು ಮಾಡಿಕೊಳ್ಳುತ್ತಿದ್ದೇವೆ.
ಕಮರ್ಷಿಯಲ್ ಬ್ಲಾಕ್ ನಲ್ಲೂ ಕೂಡ ಸಿಲಿಂಡರ್ ಗ್ಯಾಸ್ ಗಳು ಸಿಗುತ್ತಿಲ್ಲ ಇದರಿಂದಾಗಿ ಕಟ್ಟಿಗೆ ಬೆಲೆಯು ಕೂಡ ಹೆಚ್ಚಾಗಿದೆ.
ಕಟ್ಟಿಗೆ ಒಲೆಯಿಂದ ಅಡುಗೆ ಮಾಡುವುದು ತುಂಬಾ ಕಷ್ಟಕರ ಆಗುತ್ತದೆ, ಆದರೂ ಸಹ ಗ್ರಾಹಕರನ್ನು ವಾಪಸು ಕಳಿಸುವುದು ಸೂಕ್ತ ಅಲ್ಲವೆಂದು ಕಷ್ಟ ಆದರೂ ಸರಿ ಕಟ್ಟಿಗೆ ಒಲೆಯಿಂದ ಅಡುಗೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರಾದ ಚಂದ್ರಮ್ಮನವರು.
PublicNext
13/03/2026 01:52 pm
LOADING...