ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್.ಆರ್.ಪುರ: ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಪ್ರಕೃತಿ ರಕ್ಷಣೆಗೆ ಮುಂದಾದ ಯುವಕರು!

ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಚಿಕ್ಕಅಗ್ರಹಾರ ವಲಯ ವ್ಯಾಪ್ತಿಯ ಕೂಸ್ಕಲ್ ರಕ್ಷಿತ ಅರಣ್ಯದ ಕೂಸ್ಕಲ್ ದೇವಸ್ಥಾನದ ಬಳಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಸಮಾಜ ಸೇವಕ ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ನಂದಿಸಲಾಗಿದೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯರು ವಿಶ್ವನಾಥ್ ಗದ್ದೆಮನೆ ಅವರೊಂದಿಗೆ ಕೈಜೋಡಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ​ಇದೇ ವೇಳೆ ಹೆನ್ನಂಗಿ, ಬೆಳ್ಳಂಗಿ ಮತ್ತು ಅಳೆಹಳ್ಳಿ ಭಾಗದ ಕಾಡುಗಳಲ್ಲೂ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಲ್ಲಿನ ಸ್ಥಳೀಯ ರೈತ ಒಕ್ಕೂಟದ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಿ ಸಹಕರಿಸಿದ್ದಾರೆ. ಅರಣ್ಯ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಾರಿದ ಈ ತಂಡವು, ಪ್ರಕೃತಿ ನಾಶವಾಗದಂತೆ ತಡೆಯಲು ತೋರಿದ ಸಮಾಜಮುಖಿ ಕಳಕಳಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Edited By :
PublicNext

PublicNext

15/03/2026 02:57 pm

Cinque Terre

15.51 K

Cinque Terre

0

ಸಂಬಂಧಿತ ಸುದ್ದಿ