ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಸಾರ್ವಜನಿಕರು ಭೀತಿಯಲ್ಲಿ ದಿನದೂಡುವಂತಾಗಿದೆ. ಈವರೆಗೆ ಕೃಷಿ ಜಮೀನುಗಳಿಗೆ ಮಾತ್ರ ಸೀಮಿತವಾಗಿದ್ದ ಆನೆಗಳ ಹಾವಳಿ ಈಗ ಜನವಸತಿ ಪ್ರದೇಶಗಳಿಗೂ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಗುರುವಾರ ರಾತ್ರಿ ತಾಲೂಕಿನ ಸತ್ತಿಹಳ್ಳಿ ಗ್ರಾಮದ ಕೃಷ್ಣ ಎಂಬುವವರ ಮನೆಯ ಸಮೀಪ ಎರಡು ಆನೆಗಳು ಕಾಣಿಸಿಕೊಂಡು ನರ್ಸರಿಗೆ ನುಗ್ಗಿ ಅಪಾರ ಹಾನಿ ಮಾಡಿವೆ. ಕಾಫಿ ಮತ್ತು ಸಿಲ್ವರ್ ಸಸಿಗಳ ಬುಟ್ಟಿಗಳನ್ನು ತುಳಿದು ನಾಶಪಡಿಸುವುದರ ಜೊತೆಗೆ, ಅಲ್ಲಿದ್ದ ಕೃಷಿ ಉಪಕರಣಗಳನ್ನು ಸಹ ಹಾಳುಗೆಡವಿವೆ.
ಜನವಸತಿ ಪ್ರದೇಶದಲ್ಲೇ ಆನೆಗಳು ಬೀಡು ಬಿಟ್ಟಿರುವುದರಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಆನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
20/03/2026 12:57 pm
LOADING...