ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರು : ಬೀರೂರು - ಶಿವಮೊಗ್ಗ ರೈಲು ಮಾರ್ಗ ದ್ವಿಪಥಕ್ಕೆ ಸಂಸದ ರಾಘವೇಂದ್ರ ಮನವಿ

ಕಡೂರು : ಭಾರತೀಯ ರೈಲ್ವೆ ಇಲಾಖೆಯು ಕರ್ನಾಟಕದಲ್ಲಿ ರೈಲು ಸಂಪರ್ಕ ಜಾಲವನ್ನು ವಿಸ್ತರಿಸಲು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಮಲೆನಾಡು ಭಾಗವನ್ನು ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳೊಂದಿಗೆ ಜೋಡಿಸುವ ಹೊಸ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಖ್ಯವಾಗಿ ಬೀರೂರು ಜಂಕ್ಷನ್‌ನಿಂದ ಶಿವಮೊಗ್ಗದವರೆಗಿನ ಸುಮಾರು 63 ಕಿಲೋ ಮೀಟರ್ ಉದ್ದದ ಹಳಿಯನ್ನು ದ್ವಿಪಥಗೊಳಿಸುವುದು (ಡಬ್ಲಿಂಗ್) ಈ ಯೋಜನೆಯ ಪ್ರಮುಖ ಆದ್ಯತೆಯಾಗಿದೆ.

​ಪ್ರಸ್ತುತ ಈ ಮಾರ್ಗದಲ್ಲಿ ಏಕ ಹಳಿ ವ್ಯವಸ್ಥೆ ಇರುವುದರಿಂದ ರೈಲುಗಳ ಸಂಚಾರದ ವೇಗ ಮತ್ತು ಸಮಯದ ನಿರ್ವಹಣೆಯಲ್ಲಿ ಸವಾಲುಗಳು ಎದುರಾಗುತ್ತಿವೆ. ಈ ಹಳಿಯನ್ನು ದ್ವಿಪಥಗೊಳಿಸುವುದರಿಂದ ರೈಲುಗಳ ಓಡಾಟ ಮತ್ತಷ್ಟು ಸುರಕ್ಷಿತವಾಗುವುದಲ್ಲದೆ, ಪ್ರಯಾಣದ ಅವಧಿಯೂ ಗಣನೀಯವಾಗಿ ಉಳಿತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೂಡಲೇ ಡಬ್ಲಿಂಗ್ ಕಾಮಗಾರಿಯನ್ನು ಆರಂಭಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.

Edited By : PublicNext Desk
PublicNext

PublicNext

20/03/2026 06:46 pm

Cinque Terre

6.66 K

Cinque Terre

0

ಸಂಬಂಧಿತ ಸುದ್ದಿ