ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ರಸ್ತೆ ಅಪಘಾತ ನಡೆದ ಸ್ಥಳಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಭೇಟಿ - ಮೃತರ ಕುಟುಂಬಕ್ಕೆ ಸಾಂತ್ವಾನ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಸಮೀಪ ಲಾರಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಪೊಲೀಸ್ ಇಲಾಖೆಯ ಮೂರು ಮಂದಿ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂದು ಮಾಹಿತಿ ತಿಳಿದ ಗೃಹ ಸಚಿವ ಜಿ ಪರಮೇಶ್ವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದರು.

ಅಪಘಾತ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪೊಲೀಸ್ ಇಲಾಖೆಗೆ ಹೊಸದಾಗಿ ಆಯ್ಕೆಯಾದ ಐದು ಜನ ಸಬ್ ಇನ್ಸ್ಪೆಕ್ಟರ್ ಗಳಲ್ಲಿ ಒಬ್ಬರು ಮೈಸೂರಿಗೆ, ಇನ್ನುಳಿದ ನಾಲ್ಕು ಜನ ಬೆಂಗಳೂರು ಸಿಟಿಗೆ ಆಯ್ಕೆ ಆಗಿದ್ದ ಇವರುಗಳು ಬೆಂಗಳೂರಿನಿಂದ ಬಳ್ಳಾರಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ನಡೆದ ಭೀಕರ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಹಾಗೂ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಲ್ಲಿ ಯಾರದು ತಪ್ಪು ಎಂದು ಹೇಳಲು ಕಷ್ಟವಾಗುತ್ತಿದೆ ಮುಂದೆ ಚಲಿಸುತ್ತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಲಾರಿ ಚಾಲಕ ನಿಧಾನವಾಗಿ ಚಲಿಸುತ್ತಿದೆ ಎಂದು ಹೇಳಿದ್ದಾನೆ ಇದರಿಂದ ಕಾರು ಹಿಂಬದಿಯಿಂದ ವೇಗವಾಗಿ ಬಂದು ಈ ದುರ್ಘಟನೆ ಸಂಭವಿಸಿದೆ.

ಮೃತರಿಗೆ ಸರ್ಕಾರ, ಪೊಲೀಸ್ ಇಲಾಖೆ ಯಾವ ರೀತಿಯ ಸಹಾಯ ಮಾಡಬೇಕೋ ಎಲ್ಲವನ್ನೂ ಅವರ ಕುಟುಂಬಕ್ಕೆ ಮಾಡುತ್ತೇವೆ, ಅವರು ಕರ್ತವ್ಯಕ್ಕೆ ರಜೆ ಹಾಕಿದ್ದಾರೆ ಕರ್ತವ್ಯದಲ್ಲಿ ಇದ್ದರು ಎಂದು ಹೇಳಲು ಆಗುವುದಿಲ್ಲ ಇದನ್ನೆಲ್ಲ ತನಿಕೆ ಮಾಡಿ ಸರ್ಕಾರದೊಂದಿಗೆ ಚರ್ಚೆ ನಡೆಸಿ ಕರ್ತವ್ಯದಲ್ಲಿ ಇದ್ದರೂ ಇಲ್ಲವೂ ಎಂಬುದನ್ನು ನೋಡಿ ಅವರು ಈಗತಾನೆ 545 ಹುದ್ದೆಗಳ ನೇಮಕವಾಗಿದ್ದರು ಅವರೆಲ್ಲ ಟ್ರೈನಿಂಗ್ ತರಬೇತಿ ಮುಗಿಸಿದ್ದರಿಂದ ಇವರ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಲು ಮುಂದಾಗುತ್ತೇವೆ ಎಂದರು.

Edited By :
PublicNext

PublicNext

15/03/2026 05:27 pm

Cinque Terre

20.57 K

Cinque Terre

0

ಸಂಬಂಧಿತ ಸುದ್ದಿ