ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಹೆಗ್ಗೆರೆ ಗೇಟ್ ಬಳಿ ಜವರಾಯನ ಅಟ್ಟಹಾಸ - ಮೂವರು ಪ್ರೋಬೇಷನರಿ ಪಿಎಸ್ಐ ದುರ್ಮರಣ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗೇಟ್ ಬಳಿ ಇಂದು ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಬೆಂಗಳೂರು ನಗರ ವ್ಯಾಪ್ತಿಯ ಮೂವರು ಪ್ರೋಬೇಷನರಿ ಪಿಎಸ್ಐಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.

ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆ ಕಾರಟಗಿ ಮೂಲದ ಮಂಜುನಾಥ್, ರಾಯಚೂರು ಜಿಲ್ಲೆಯ ವಿರೂಪಾಪುರ ಗ್ರಾಮದ ಅಮರೇಶ್ ಮತ್ತು ಶಿವಮೊಗ್ಗ ಜಿಲ್ಲೆ ಕುಡುವಲ್ಕಿ ಗ್ರಾಮದ ಸಚಿನ್ ಎಂದು ಗುರುತಿಸಲಾಗಿದೆ. ಗೆಳೆಯನ ಮದುವೆಗೆ ಖುಷಿಯಿಂದ ಹೊರಟಿದ್ದ ಈ ಮೂವರು ಯುವಕರು ಅರ್ಧ ದಾರಿಯಲ್ಲೇ ಸಾವಿಗೆ ಶರಣಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹೊಸ ಅಧಿಕಾರಿಗಳಾಗಿ ನೇಮಕಗೊಂಡಿದ್ದ ಇವರ ಸಾವು, ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದ್ದು, ಕಣ್ಣೀರ ಕೂಪಕ್ಕೆ ತಳ್ಳಿದೆ. ಮೃತರ ಸಂಬಂಧಿ ಶರಣಬಸವ ಅವರು ದುಃಖತಪ್ತರಾಗಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾಓ: ಇನ್ನೂ ಭೀಕರ ಅಪಘಾತದ ಸುದ್ದಿ ತಿಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಬಳಿ ಮಾಹಿತಿ ಪಡೆದರು. ಬಳಿಕ ಚಳ್ಳಕೆರೆ ತಾಲ್ಲೂಕು ಆಸ್ಪತ್ರೆ ಶವಾಗಾರಕ್ಕೆ ಭೇಟಿ ಮಾಡಿ ಮೃತ ದೇಹಗಳ ವೀಕ್ಷಣೆ ಮಾಡಿದರು.

ಒಟ್ಟಾರೆ ಕಷ್ಟಪಟ್ಟು ಓದಿ ನೌಕರಿ ಪಡೆದು ಬದುಕು ಕಟ್ಟಿಕೊಳ್ಳುವ ಸ್ನೇಹಿತರು ದಾರುಣ ಸಾವಿಗೀಡಾಗಿದ್ದಾರೆ. ಅತ್ತ ಸ್ನೇಹಿತರ ಬರುವಿಕೆಯ ನಿರೀಕ್ಷೆಯಲ್ಲಿದ್ದ ಗೆಳೆಯ ದುಃಖದಲ್ಲೇ ಹಸೆಮಣೆ ಏರುವ ಪರಿಸ್ಥಿತಿ ನಿರ್ಮಾಣವಾಗಿದೆ.

Edited By : Vinayak Patil
PublicNext

PublicNext

15/03/2026 08:13 pm

Cinque Terre

34.77 K

Cinque Terre

1

ಸಂಬಂಧಿತ ಸುದ್ದಿ