ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಸುರಪುರಕ್ಕೆ ಒಂದು ದಿನಕ್ಕೆ 560 ಗ್ಯಾಸ್ ವಿತರಣೆ , ಏಜೆನ್ಸಿ ಮುಂದೆ ಜಮಾಯಿಸಿದ ಜನ

ಸುರಪುರ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಾದ್ಯಂತ ಗ್ಯಾಸ್ ಟ್ರಬಲ್ ಶುರುವಾಗಿದ್ದು ಸುರಪುರಕ್ಕೂ ಬಿಸಿ ತಟ್ಟಿದೆ.

ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿಗೆ ಸಿಲಿಂಡರ್ ಹೊತ್ತ ವಾಹನ ಬರುತ್ತಿದ್ದಂತೆ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್ ಖರೀದಿಸಲು ಜನ ಜಮಾಯಿಸಿರುವ ಘಟನೆ ನಡೆದಿದೆ.

ಸದ್ಯ ಸುರಪುರ ತಾಲೂಕಿನಲ್ಲಿ ಗೃಹೋಪಯೋಗಿ ಸಿಲಿಂಡರ್ ಗ್ಯಾಸ್ ಗೆ ಯಾವುದೇ ತೊಂದರೆಯಾಗಿಲ್ಲವಾದರೂ. ಗ್ಯಾಸ್ ಸಿಗುವುದಿಲ್ಲವೆಂದು ತಿಳಿದು ಭಯಭೀತರಾಗಿ ಜನ ಏಜೆನ್ಸಿ ಮುಂಭಾಗದಲ್ಲಿ ಗ್ಯಾಸ್ ಕೊಳ್ಳಲು ಮುಗಿಬಿದ್ದಿದ್ದಾರೆ.

ಕಳೆದ 11 ದಿನಗಳಿಂದ ಸುರಪುರಕ್ಕೆ ಕಮರ್ಷಿಯಲ್ ಗ್ಯಾಸ್ ವಿತರಣೆ ಸಂಪೂರ್ಣ ಬಂದ್ ಆಗಿದೆ. ಆದರೆ ಗೃಹೋಪಯೋಗಿ ಗ್ಯಾಸ್ ದಿನ ಬಿಟ್ಟು ದಿನಕ್ಕೆ ಸುಮಾರು 560 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಸುರಪುರ ತಾಲೂಕಿನಲ್ಲಿ ಗೃಹೋಪಯೋಗಿ ಗ್ಯಾಸ್ ಗೆ ತೊಂದರೆ ಇಲ್ಲ ಜನರು ಭಯಭೀತರಾಗದಂತೆ ನಾಗರೀಕ ಮತ್ತು ಆಹಾರ ಸರಬರಾಜು ನೀರಿಕ್ಷಕ ಆದಯ್ಯ ಸ್ವಾಮಿ ತಿಳಿಸಿದ್ದಾರೆ. ಆದ್ರೂ ಜನ ಗ್ಯಾಸ್ ಕೊಳ್ಳಲು ಮುಗಿಬೀಳ್ತಿದ್ದಾರೆ.

ಪುರುಷೋತ್ತಮ್ ನಾಯಕ್, ಪಬ್ಲಿಕ್ ನೆಕ್ಸ್ಟ್, ಸುರಪುರ

Edited By :
PublicNext

PublicNext

16/03/2026 01:41 pm

Cinque Terre

8.8 K

Cinque Terre

0

ಸಂಬಂಧಿತ ಸುದ್ದಿ