ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವ್ಯವಸ್ಥೆಯ ತಾಣವಾದ ಜಿಲ್ಲಾಕ್ರೀಡಾಂಗಣದ ಈಜುಕೊಳ..

ಯಾದಗಿರಿ : ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಹೆಸರಿಗಷ್ಟೆ ಎನ್ನುವಂತಾಗಿದೆ ಇದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ ಬಿಸಿಲಿನ ಬೇಗೆಗೆ ಈಜುಕೊಳಕ್ಕೆ ಬರುವ ಜನರಿಗೆ ನಿರಾಸೆ ಉಂಟು ಮಾಡುತ್ತಿದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಇರುವ ಈಜುಕೊಳ ನಿರ್ವಹಣೆಯಿಲ್ಲದೆ ಸಂಪೂರ್ಣ ಹಾಳಾಗಿ ಹೋಗಿದೆ ಈಜುಕೊಳದಲ್ಲಿರುವ ನೀರು ಕೂಡ ಹುಳ ತುಂಬಿಕೊಂಡಿದೆ.

ಪ್ರತಿವರ್ಷ ಬೇಸಿಗೆ ಮುನ್ನವೇ ಆರಂಭವಾಗುತ್ತಿದ್ದ ಈಜುಕೊಳ ಈ ವರ್ಷ ಕ್ಲೋಸ್‌ ಮಾಡಲಾಗಿದೆ ಖಾಸಗಿ ಈಜುಕೊಳದವರಿಗೆ ಅನುಕೂಲ ಮಾಡಲು ಇದನ್ನು ಬಂದ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ ಸರ್ಕಾರಿ ಈಜುಕೊಳ ಮುಚ್ಚಿದರೆ ಖಾಸಗಿ ಈಜುಕೊಳದ ಕಡೆ ಮುಖ ಮಾಡುತ್ತಾರೆ ಇದರಿಂದ ಅಧಿಕಾರಿಗಳು ಭಾಗಿಯಾದ್ರಾ ಎನ್ನುವ ಅನುಮಾನ ಮೂಡುತ್ತಿದೆ ಇದೇ ಕಾರಣಕ್ಕಾಗಿ ಈಜುಕೊಳ ಆರಂಭಿಸುತ್ತಿಲ್ಲ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಬಿಸಿಲಿನ ತಾಪಮಾನ 38*ಡಿಗ್ರಿ ತಲುಪಿದೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಬೇಕು ಕಳೆದ ಕೆಲ ತಿಂಗಳ ಹಿಂದೆ ರಾಜ್ಯ ಮಟ್ಟದ ಯುವಜನ ಕ್ರೀಡೋತ್ಸವ ಕೂಡ ಆಯೋಜನೆ ಮಾಡಲಾಗಿತ್ತು ಆದ್ರೂಕೂಡ ಅವ್ಯವಸ್ಥೆ ಮಾತ್ರ ಮರೆಯಾಗಿಲ್ಲ ಇದರಿಂದ ಇಲ್ಲಿನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಬೇಕು ಜಿಲ್ಲಾ ಕ್ರೀಡಾಂಗಣವನ್ನು ಅವ್ಯವಸ್ಥೆಯಿಂದ ಹೊರತರುತ್ತಾರಾ ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

18/03/2026 05:42 pm

Cinque Terre

13.92 K

Cinque Terre

0