ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಾಲ ಸಾಲಭ್ಯ ಪಡೆದು ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು - ಸಿದ್ದಬಸವ ದೇವರು

ಬೆಳಗಾವಿ: ಸರ್ಕಾರಿ ಇಲಾಖೆಯ ಯೋಜನೆಗಳು ಹಾಗೂ ರಾಷ್ಟ್ರೀಯಕೃತ ಬ್ಯಾಂಕ್ ಗಳಿಂದ ಸಾಲ ಸಾಲಭ್ಯ ಪಡೆದು ಸ್ವ ಉದ್ಯೋಗ ಮಾಡಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು, ನಕಾರಾತ್ಮಕ ಜನರು ಹಾಗೂ ವಿಚಾರಗಳಿಂದ ದೂರ ಇದ್ದು ತಮ್ಮ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಯಮಕನಮರಡಿ ಶೂನ್ಯ ಸಂಪಾದನಾ ಪೀಠದ ಸಿದ್ದಬಸವ ದೇವರು ಕರೆ ನೀಡಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸ್ವ ಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲ್ಲೂಕು ಪಂಚಾಯತ್ ಹುಕ್ಕೇರಿ ಹಾಗೂ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಉದ್ಯೋಗ ಕೈಗೊಳ್ಳಲು ಉದ್ಯಮಿಗಳಿಗೆ ತಾಲ್ಲೂಕಿನ ಸುಮಾರು 50 ಸ್ವ ಸಹಾಯ ಸಂಘಗಳಿಗೆ ರೂ. 1 ಕೋಟಿ 50 ಲಕ್ಷ ಬ್ಯಾಂಕ್ ಸಾಲ ಮಂಜೂರಾತಿ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಿದರು.

ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಒಕ್ಕೂಟ ಮತ್ತು ಅತ್ಯುತ್ತಮ ಮಹಿಳಾ ಸ್ವ ಸಹಾಯ ಸಂಘಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

Edited By : Abhishek Kamoji
Kshetra Samachara

Kshetra Samachara

16/03/2026 08:46 pm

Cinque Terre

5.08 K

Cinque Terre

0

ಸಂಬಂಧಿತ ಸುದ್ದಿ