ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಯುಗಾದಿ ಹಬ್ಬಕ್ಕೆ ಇಡೀ ಗ್ರಾಮದ ಜನರಿಂದಲೇ ಕೃಷ್ಣಾನದಿಗೆ ಬಾಗಿನ ಅರ್ಪಣೆ

ಚಿಕ್ಕೋಡಿ: ಯುಗಾದಿ ಹಬ್ಬದ ಅಂಗವಾಗಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಇಡೀ ಜನರು ಸೇರಿಕೊಂಡು ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಮೂಲಕ ತಮ್ಮ ಅನಾದಿ ಕಾಲದ ಸಂಪ್ರದಾಯವನ್ನು ಭಕ್ತಿಭಾವದಿಂದ ಮುಂದುವರಿಸಿದರು.

ಗ್ರಾಮದ ಹೆಣ್ಣುಮಕ್ಕಳನ್ನು ಬೇರೆ ಊರುಗಳಿಗೆ ಮದುವೆ ಮಾಡಿಕೊಟ್ಟ ನಂತರ ಅವರು ತವರು ಗ್ರಾಮವಾದ ಇಂಗಳಿ ಗ್ರಾಮಕ್ಕೆ ಬಂದು ಕುಟುಂಬ ಸಮೇತವಾಗಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಬೇಕು ಎಂಬುದು ಪ್ರತೀತಿಯಾಗಿದೆ.

ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ಕೊಟ್ಟ ಹೆಣ್ಣುಮಕ್ಕಳು ಇಂಗಳಿ ಗ್ರಾಮಕ್ಕೆ ಆಗಮಿಸಿ ಅತ್ಯಂತ ಭಕ್ತಿಭಾವದಿಂದ ಕುಟುಂಬ ಸಮೇತವಾಗಿ ಕೃಷ್ಣಾನದಿಗೆ ಬಾಗಿನ ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ತೋರಿದರು.

ಚೌಕಾಕಾರದ ಬಾಗಿನವನ್ನು ತಯಾರಿಸಿ ನಾಲ್ಕು ಮೂಲೆಗಳಲ್ಲಿ ಹೋಳಿಗೆ,ದೀಪಗಳನ್ನು ಹಾಗೂ ಬಾಗಿನದ ಮಧ್ಯದಲ್ಲಿ ಕೊಬ್ಬರಿ,ಖರ್ಜೂರ,ತೆಂಗಿನಕಾಯಿ,ಅನ್ನ ಸೇರಿದಂತೆ ವಿವಿಧ ಪದಾರ್ಥಗಳನ್ನು ಇಡಲಾಗಿತ್ತು.ಬಳಿಕ ಹೆಣ್ಣುಮಕ್ಕಳು ಕೃಷ್ಣಾನದಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ ಬಾಗಿನವನ್ನು ಅರ್ಪಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಡೊಣವಾಡೆ ಎಂಬುವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಯುಗಾದಿ ಹಬ್ಬದ ಅಂಗವಾಗಿ ಕೃಷ್ಣಾನದಿಗೆ ಬಾಗಿನವನ್ನು ಅರ್ಪಣೆಯನ್ನು ಮಾಡಿದ್ದೇವೆ.ಬೆ ಳೆಗಳು ಸಮೃದ್ಧವಾಗಿ ಬೆಳೆಯಲಿ,ಜನಜಾನುವಾರುಗಳಿಗೆ ಉತ್ತಮ ರೀತಿಯ ನೀರು ಸಿಗಲಿ ಹಾಗೂ ರೈತರು ಸಮೃದ್ಧಿಯ ಬದುಕನ್ನು ಸಾಗಿಸಲಿ ಎಂದು ಕೃಷ್ಣಾನದಿಗೆ ಪ್ರಾರ್ಥಿಸಿಕೊಂಡೆವು ಎಂದರು.

ಒಟ್ಟಿನಲ್ಲಿ ತಾನು ಬೆಳೆದ ಊರು ಸುಖ, ಸಮೃದ್ಧಿ, ನೆಮ್ಮದಿಯಿಂದ ಕೂಡಿರಲಿ ಎಂಬ ನಿಸ್ವಾರ್ಥ ಮನೋಭಾವನೆಯಿಂದ ಹೆಣ್ಣುಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೃಷ್ಣಾನದಿಗೆ ಬಾಗಿನ ಅರ್ಪಣೆ ಮಾಡಿರುವ ಕಾರ್ಯ ಪ್ರಶಂಸನೀಯ..

ಡಿ.ಕೆ.ಉಪ್ಪಾರ ಪಬ್ಲಿಕ್ ನೆಕ್ಸ್ಟ ಚಿಕ್ಕೋಡಿ

Edited By : Manjunath H D
PublicNext

PublicNext

20/03/2026 07:28 pm

Cinque Terre

11.95 K

Cinque Terre

0

ಸಂಬಂಧಿತ ಸುದ್ದಿ