ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜೃಂಭಣೆಯಿಂದ ಜರುಗಿದ ಶ್ರೀ ಬಂಡೆಮ್ಮಾದೇವಿ ಜಾತ್ರಾ ಮಹೋತ್ಸವ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲೂರ ಗ್ರಾಮದ ಶ್ರೀ ಬಂಡೆಮ್ಮಾದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಶ್ರೀ ದೇವಿಯ ದಿವ್ಯಸಾನಿಧ್ಯದಲ್ಲಿ ಭಜನಾ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ, ಚೌಡಕಿ ಪದಗಳು ಜರುಗಿದವು. ಮಹಾರುದ್ರಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಂಡೆಮ್ಮಾದೇವಿ ಮೂರ್ತಿ ಹೂವಿನ ಮಾಲೆ ಹಾಗೂ ಬಂಗಾರದ ಆಭರಣಗಳಿಂದ ಕಂಗೊಳಿಸುತ್ತಿತ್ತು.

ಶ್ರೀ ಬಂಡೆಮ್ಮಾದೇವಿ ಜಾತ್ರೆಗೆ ಮಲ್ಲೂರ ಗ್ರಾಮದ ಸುತ್ತಮುತ್ತಲಿನ ದೇವರಗಳು ಜಾತ್ರೆಗೆ ಆಗಮನ ಮಾಡಿಕೊಂಡರು. ಈ ಜಾತ್ರೆಗೆ ಆಗಮಿಸಿದ ಬಂದ ಭಕ್ತರಿಗೆ ಜಾತ್ರೆ ಸಮಿತಿ ವತಿಯಿಂದ ಮಹಾ ಪ್ರಸಾದ ಹಾಗೂ ನೀರಿನ ವ್ಯವಸ್ಥೆ ಅತೀ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಶ್ರೀ ಬಂಡೆಮ್ಮಾದೇವಿ ದೇವಸ್ಥಾನಕ್ಕೆ ವಿದ್ಯುತ್ ಸಿಂಗಾರ, ಹಾಗೂ ಬಾಳೆ ದಿಂಡು, ಹಾಗೂ ಮಲ್ಲಿಗೆ ಹೂವಿನ ಮಾಲೆ ಹಾಗೂ ಸಂಪಿಗೆ ಹೂವಿನ ಮಾಲೆ, ಕಬ್ಬು, ಮಾವಿನ ತೋರಣ, ಹಾಕಿ ದೇವಸ್ಥಾನವನ್ನು ಸಿಂಗಾರ ಮಾಡಿದ್ದರು.

ಈ ಜಾತ್ರೆಯ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ಗುರುಹಿರಿಯರು ಹಾಗೂ ಮಲ್ಲೂರ ಗ್ರಾಮದ ಸುತ್ತಮುತ್ತಲಿನ ಜನರು ಅತೀ ಹೆಚ್ಚು ಜನಸಂಖ್ಯೆ ಸೇರಿ ದೇವರ ದರ್ಶನ ಪಡೆದುಕೊಂಡರು ಭಕ್ತರು ದೇವಿ ಜಾತ್ರೆಯಲ್ಲಿ ತನು ಮನ ಸೇವೆ ಸಲ್ಲಿಸಿದರು.

Edited By :
PublicNext

PublicNext

21/03/2026 01:28 pm

Cinque Terre

6.61 K

Cinque Terre

0

ಸಂಬಂಧಿತ ಸುದ್ದಿ