ಬೆಳಗಾವಿ: ಯುಗಾದಿ ಉತ್ಸವ ಹಾಗೂ ಶೋಭಾಯಾತ್ರೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ಪ್ರಚಾರ ಪಡಿಸುವ ಉದ್ದೇಶದಿಂದ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿಯು ಯಶಸ್ವಿಯಾಗಿ ಜರುಗಿತು.
ಕೇಸರಿ ಧ್ವಜಗಳನ್ನು ಏರಿಸಿದ ನೂರಾರು ಬೈಕ್‌ಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಯುಗಾದಿ ಹಬ್ಬದ ಸಂಭ್ರಮಕ್ಕೆ ನಾಂದಿ ಹಾಡಿದವು.
ಬೈಕ್ ರ‍್ಯಾಲಿಯು ಬೆಳಗಾವಿಯ ವಡಗಾಂವನ ಜೈಲ್ ಸ್ಕೂಲ್ ನಂ. 14 ರಿಂದ ಪ್ರಾರಂಭವಾಗಿ, ಖಡೇ ಬಜಾರ್‌ನಲ್ಲಿರುವ ಶಿವ ಛತ್ರಪತಿ ಪ್ರತಿಮೆಯವರೆಗೆ ಸಾಗಿತು.
ಬೈಕ್ ರ‍್ಯಾಲಿಯಲ್ಲಿ ಮಹಿಳೆಯರೂ ಅತ್ಯಂತ ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಸ್ತುಬದ್ಧವಾಗಿ ಬೈಕ್ ಚಲಾಯಿಸುವ ಮೂಲಕ ಗಮನ ಸೆಳೆದರು. ರ‍್ಯಾಲಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಯುವಜನರು ಸಂಭ್ರಮಿಸಿದರು.
Kshetra Samachara
21/03/2026 08:03 am
LOADING...