ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ 3.07 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ: ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ 3.07 ಕೋಟಿ ದಾಖಲೆ ಕಾಣಿಕೆ ಸಂಗ್ರಹವಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊರವಲಯದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಮಾರ್ಚ್ 9ರಿಂದ 12ರ ಅವಧಿಯಲ್ಲಿ ನಡೆದ ಎಣಿಕೆಯಲ್ಲಿ ದಾಖಲೆ ಕಾಣಿಕೆ ಸಂಗ್ರಹವಾಗಿದೆ. ಈ ವೇಳೆ 3.07 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ‌. ₹2.78 ಕೋಟಿ ನಗದು, 16.16 ಲಕ್ಷ ಮೌಲ್ಯದ ಮೌಲ್ಯದ 100 ಗ್ರಾಂ ಚಿನ್ನಾಭರಣ,12.35 ಲಕ್ಷ ಮೌಲ್ಯದ 4 ಕೆಜಿ 547 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿತ್ತು.

ದೇವಸ್ಥಾನ ಸಿಬ್ಬಂದಿ ಜತೆಗೆ ವಿದ್ಯಾರ್ಥಿಗಳಿಂದಲೂ ಎಣಿಕೆಯಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಎಣಿಕೆ ಹಣ ಬಳಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Edited By :
PublicNext

PublicNext

14/03/2026 02:09 pm

Cinque Terre

11.7 K

Cinque Terre

0

ಸಂಬಂಧಿತ ಸುದ್ದಿ