ಶಿರಸಿ: ಉ.ಕ ಜಿಲ್ಲೆಯಲ್ಲಿ ಆಕ್ರೋಶ, ತೀವ್ರ ಜನಾಂದೋಲನಕ್ಕೆ ಕಾರಣವಾಗಿರುವ ಬೇಡ್ತಿ-ಅಘನಾಶಿನಿ ನದೀ ತಿರುವು ಯೋಜನೆಗಳ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೀರಾವರಿ ಸಚಿವರ ವಿಶೇಷ ಸಭಾ ಕೊಠಡಿಯಲ್ಲಿ ಉ.ಕ ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು, ಸಮೀತಿ ಪ್ರಮುಖರ ಜೊತೆ ಗಹನ ಮಾತುಕತೆ ನಡೆಸಿದರು. ಉಪಮುಖ್ಯ ಮಂತ್ರಿಗಳು ಈವರೆಗೆ ಎಲ್ಲೂ ನದೀ ಜೋಡಣೆ ಯೋಜನೆಗಳು ಯಶಸ್ವಿ ಆಗಿಲ್ಲ. ಹಲವು ಗಂಭೀರ ವೈಜ್ಞಾನಿಕ ಅಂಶಗಳು ಎದುರಾಗಿವೆ ಎಂದರು.
ಅಲ್ಲದೇ ಬೇಡ್ತಿ-ವರದಾ ಯೋಜನೆ ಬಗ್ಗೆ ಪುನರ್ ಪರಿಶೀಲನೆ ಅಗತ್ಯ. ಅಘನಾಶಿನಿ-ವೇದಾವತಿ ತಿರುವು ಬಗ್ಗೆ ಆರಂಭಿಕ ಪರಿಶೀಲನೆಯೇ ಆಗಿಲ್ಲ. ಪೂಜ್ಯ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರು ಉ.ಕ ಜನಪ್ರತಿನಿಧಿಗಳು ಉ.ಕ ಜನತೆ ಬೃಹತ್ ಜನಾಂದೋಲನ ನಡೆಸಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ. ತಜ್ಞರು, ಸಮೀತಿಯವರ ಜೊತೆ ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಉ.ಕ ಜನತೆ ಆತಂಕ ಪಡಬಾರದು ಎಂದು ರಾಜ್ಯ ಸರ್ಕಾರದ ಪರವಾಗಿ ಆಶ್ವಾಸನೆ ನೀಡಿದರು.
ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಮಂಕಾಳು ವೈದ್ಯ ವಿಧಾನ ಸಭಾ ಅಧಿವೇಶನದ ಒತ್ತಡದಲ್ಲೂ ಬೇಡ್ತಿ-ಅಘನಾಶಿನಿ ನಿಯೋಗದ ಜೊತೆ ಮಾತುಕತೆ ಏರ್ಪಡಿಸಿದ್ದೇವೆ. “ಪೂಜ್ಯ ಸ್ವರ್ಣವಲ್ಲೀ ಗುರುಗಳ ಸೂಚನೆಯಂತೆ ಈ ಸಭೆ ಏರ್ಪಡಿಸಿದ್ದೇವೆ” ಎಂದರು. ಶಾಸಕ ಭೀಮಣ್ಣ ನಾಯ್ಕ ಅವರು ನೀರಿಲ್ಲದ ನದಿ ತಿರುವು ವ್ಯರ್ಥ ಎಂದು ಹೇಳಿದರು..
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರು ಬೇಡ್ತಿಯಿಂದ ಕೆರೆತುಂಬಿಸುವ, ಕುಡಿಯುವ ನೀರಿನ 4 ಯೋಜನೆಗಳಿಗೇ ನೀರಿಲ್ಲ” ಎಂದು ವಾಸ್ತವ ಚಿತ್ರಣ ನೀಡಿದರು. ಕರಾವಳಿ ಮೀನುಗಾರರು, ರೈತರು ಬೇಡ್ತಿ-ಗಂಗಾವಳಿ, ಅಘನಾಶಿನಿ ನದಿಗಳ ಸಿಹಿ ನೀರಿನ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ” ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ-ಅಭಿಪ್ರಾಯ ನೀಡಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರು ವನವಾಸಿಗಳ ಬದುಕು ನದೀ ತಿರುವಿನಿಂದ ಅತಂತ್ರವಾಗಲಿದೆ” ಎಂದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಭೂಕುಸಿತ ವರದಿ, ಧಾರಣಾ ಸಾಮರ್ಥ್ಯ ವರದಿ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಇತ್ಯಾದಿ ತಜ್ಞ ವರದಿಗಳನ್ನು ನೀಡಿದರು. 3 ಲಕ್ಷ ಜನರ ಆತಂಕದ ಬೇಡ್ತಿ-ಅಘನಾಶಿನಿ ನದಿ ಉಳಿಸಿ ಅಹವಾಲು ಸಲ್ಲಿಸಿದರು.
ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿಘ್ನೆಶ್ವರ ಹೆಗಡೆ ಬೊಮ್ಮನಳ್ಳಿ ಬೇಡ್ತಿ ಪ್ರದೇಶ, ಸೋಂದಾ ಸ್ವರ್ಣವಲ್ಲೀಗೆ ಭೇಟಿ ನೀಡಲು ಶ್ರೀ ಡಿ.ಕೆ ಶಿವಕುಮಾರ ಅವರಿಗೆ ಆಹ್ವಾನ ನೀಡಿದರು. ತಜ್ಞ ಡಾ| ಬಾಲಚಂದ್ರ ಸಾಯಿಮನೆ ನೀರಿನ ಲಭ್ಯತೆಯ ನೈಜ ಚಿತ್ರಣ ಮುಂದಿಟ್ಟರು. ಗೋಪಾಲಕೃಷ್ಣ ತಂಗರ‍್ಮನೆ, ವಿಶ್ವನಾಥ ಶೀಗೆಹಳ್ಳಿ ಅಶ್ವಿನಿ ಕುಮಾರ, ವಿವೇಕ್ ಗಡಿಹಿತ್ಲು, ರವಿ ಮುಂತಾದವರು ಇದ್ದರು.
Kshetra Samachara
17/03/2026 08:48 pm