ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಸಾರಿಗೆ ಇಲಾಖೆಯ ನೂತನ ಬಸ್‌ಗಳಿಗೆ ಶಾಸಕ ಭೀಮಣ್ಣ ನಾಯ್ಕ ಅವರಿಂದ ಚಾಲನೆ

ಶಿರಸಿ: ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಶಿರಸಿ ನಗರದ ಸಾರಿಗೆ ಇಲಾಖೆಗೆ ಸೇರ್ಪಡೆಯಾದ ನೂತನ ಬಸ್‌ಗಳಿಗೆ ಶಾಸಕ ಭೀಮಣ್ಣ ನಾಯ್ಕ ಅವರು ಇಂದು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ನೂತನ ಬಸ್‌ಗಳಿಗೆ ಶಾಸಕರು ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶಿರಸಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಸುಮಾ ಉಗ್ರಾಣಕರ, ರೋಟರಿ ಅಧ್ಯಕ್ಷ ಶ್ರೀನಿವಾಸ ನಾಯ್ಕ ಹಾಗೂ ಉತ್ತರ ಕನ್ನಡ ಸಾರಿಗೆ ಇಲಾಖೆಯ ಡಿಸಿ (ವಿಭಾಗೀಯ ನಿಯಂತ್ರಣಾಧಿಕಾರಿ) ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/03/2026 06:42 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ