ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಶ್ರಮದವರ ಜೊತೆ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ..

ಉಡುಪಿ: ಬಿಗ್ ಬಾಸ್ ಕನ್ನಡ 12 ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯ ಸಾಲಿಗ್ರಾಮದಲ್ಲಿರುವ ಹೊಸಬದುಕು ಆಶ್ರಮದಲ್ಲಿ ಆಚರಿಸಿ ಗಮನ ಸೆಳೆದರು.

ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ಅವರು ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದು, ಅವರೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷ ಹಂಚಿಕೊಂಡರು.

ಈ ವೇಳೆ ಆಶ್ರಮದ ನಿವಾಸಿಗಳು ಹಾಡು ಹಾಡಿದಾಗ ರಕ್ಷಿತಾ ಶೆಟ್ಟಿ ಅವರ ಜೊತೆಗೂಡಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದರು. ಆಶ್ರಮದವರೊಂದಿಗೆ ಬೆರೆತು ಹಾಡಿಗೆ ಹೆಜ್ಜೆ ಹಾಕಿದ ರಕ್ಷಿತಾ ಶೆಟ್ಟಿ ಅವರ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆಶ್ರಮದ ನಿವಾಸಿಗಳೂ ಅವರೊಂದಿಗೆ ಸಂಭ್ರಮಿಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಕಾರ್ಯಕ್ರಮದ ವೇಳೆ ಆಶ್ರಮದ ಸದಸ್ಯರು ರಕ್ಷಿತಾ ಶೆಟ್ಟಿ ಅವರಿಗೆ ಶುಭಾಶಯ ತಿಳಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

Edited By :
PublicNext

PublicNext

17/03/2026 09:11 pm

Cinque Terre

28.38 K

Cinque Terre

0

ಸಂಬಂಧಿತ ಸುದ್ದಿ