ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇದೇ ಮೊದಲ ಬಾರಿಗೆ ಕುಡ್ಲದಲ್ಲಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್- ಮೂವರು ರಾಜ್ಯಮಟ್ಟದ ಆಟಗಾರ್ತಿಯರು ಭಾಗಿ

ಮಂಗಳೂರು: ಪುರುಷ ಪಾರಮ್ಯದ ಕ್ರಿಕೆಟ್ ಆಟದಲ್ಲಿ ಮಹಿಳಾ ತಂಡಗಳು ಸಾಧನೆ ಮಾಡಿದ್ದು ನಮಗೆ ಗೊತ್ತಿರುವಂತದ್ದೇ. ಆದರೆ ಮಂಗಳೂರಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಕ್ರಿಕೆಟ್ ಆಟ ಆರಂಭವಾದರೂ ಮಹಿಳಾ ತಂಡಕ್ಕೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ.

ಮಂಗಳೂರಿನಲ್ಲಿ ಈವರೆಗೆ ಹೆಣ್ಣು ಮಕ್ಕಳ ಕ್ರಿಕೆಟ್ ಕ್ರೀಡಾ ಕೂಟ ನಡೆದೇ ಇಲ್ಲ ಎಂಬ ಕಾರಣಕ್ಕೆ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರಿನಲ್ಲಿ ಪ್ರಥಮ ಮಹಿಳಾ ಲೆದರ್-ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಿದೆ.

ನಾರ್ಥನ್ ಪ್ರಾಪರ್ಟೀಸ್ ಸಹಯೋಗದಲ್ಲಿ ನೆಹರೂ ಮೈದಾನದಲ್ಲಿ ಮಾರ್ಚ್ 18ರಿಂದ 21ರವರೆಗೆ ಈ ಪಂದ್ಯಾಟ ನಡೆಯುತ್ತಿದೆ. 21ರಂದು ಫೈನಲ್ ಸ್ಪರ್ಧೆ ನಡೆಯುತ್ತಿದೆ. ದೇಶ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಕಲ್ಪನಾ ಆಚಾರ್ ಫೈನಲ್‌ ಪಂದ್ಯಾಟದ ವೇಳೆ ಉಪಸ್ಥಿತರಿರುತ್ತಾರೆ‌.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಕ್ರಿಕೆಟ್ ತರಬೇತಿ ಪಡೆಯುತ್ತಿರುವ 75ಆಟಗಾರ್ತಿಯರು ಈ ಪಂದ್ಯಾಟದಲ್ಲಿ ಆಡುತ್ತಿದ್ದಾರೆ. ಒಂದೊಂದು ತಂಡದಲ್ಲಿ 15ಮಂದಿ ಆಟಗಾರ್ತಿಯರು ಇದ್ದು, ಒಟ್ಟು ಐದು ತಂಡಗಳ ನಡುವೆ ಪಂದ್ಯಾಟ ನಡೆಯುತ್ತಿದೆ.

ರಾಜ್ಯಮಟ್ಟದಲ್ಲಿ ಆಟವಾಡುತ್ತಿರುವ ಮೂವರು ಕ್ರಿಕೆಟ್ ಆಟಗಾರ್ತಿಯರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ಕರಾವಳಿಯಿಂದ ಇನ್ನಷ್ಟು ಆಟಗಾರ್ತಿಯರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಈ ವೇದಿಕೆಯನ್ನು ಒದಗಿಸಿದೆ. ಅವರ ಈ ಸದಾಶಯ ಈಡೇರಲಿ‌ ಎಂಬುದೇ ನಮ್ಮ ಆಶಯ.

Edited By :
PublicNext

PublicNext

18/03/2026 06:57 pm

Cinque Terre

16.35 K

Cinque Terre

0

ಸಂಬಂಧಿತ ಸುದ್ದಿ