ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಸಾವಿರ ಕೋಟಿ ವ್ಯರ್ಥ, ಸಾಸಿವೆಯಷ್ಟು ಉಪಯೋಗವಿಲ್ಲ - ಏನಿದು ವ್ಯವಸ್ಥೆ?'

ಹುಬ್ಬಳ್ಳಿ: ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿರುವ ಸ್ಮಾರ್ಟ್ ಸಿಟಿ ಯೋಜನೆಯ ಲಾಭ ಜನರಿಗೆ ನಯಾಪೈಸೆ ತಲುಪಿಲ್ಲ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕತೆಯೋ..? ಪಾಲಿಕೆ ನಿರ್ವಹಣೆ ವೈಪಲ್ಯವೋ..? ಅದೆಷ್ಟೋ ಹಸ್ತಾಂತರಗೊಂಡ ಯೋಜನೆಗಳು ಜಟಿಲ ಸಮಸ್ಯೆಗಳ ಜಠರದಂತಾಗಿವೆ.

ಇಂದಿರಾ ಗಾಜಿನ ಮನೆ, ನೆಹರೂ ಮೈದಾನ, ಪುಟಾಣಿ ರೈಲು, ಫಜಲ್ ಪಾರ್ಕಿಂಗ್, ಜನತಾ ಬಜಾರ್ ಮಾರ್ಕೆಟ್ ಸೇರಿದಂತೆ ಬಹುತೇಕ ಯೋಜನೆಗಳು ಸರಿಯಾದ ನಿರ್ವಹಣೆ ಕೊರತೆ, ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಪ್ರಾಜೆಕ್ಟ್ ಗಳಿಂದ ಇಂದಿಗೂ ಸಾರ್ವಜನಿಕರಿಗೆ ವರವಾಗದೇ ಉಳಿದಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಹೌದು.. ಅವಳಿನಗರದ ಜನರಿಗೆ ಗುಣಮಟ್ಟದ ಸೇವೆ ನೀಡಲು ಹಲವಾರು ಯೋಜನೆಯನ್ನು ತನ್ನ ಉದರದಲ್ಲಿ ಹೊತ್ತು ತಂದಿದ್ದ ಸ್ಮಾರ್ಟ್ ಸಿಟಿಯು ಆರಂಭದಲ್ಲಿಯೇ ಹಳಿ ತಪ್ಪಿದ್ದು, ಈಗ ಪಾಲಿಕೆಗೆ ಹಸ್ತಾಂತರಗೊಂಡ ಬೆನ್ನಲ್ಲೇ ಮತ್ತಷ್ಟು ಹಾಳಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸ್ಮಾರ್ಟ್ ಸಿಟಿಯ ಬೇಜವಾಬ್ದಾರಿಯೋ..? ಪಾಲಿಕೆಯ ನಿರ್ವಹಣಾ ವೈಪಲ್ಯವೋ ಅರ್ಥವಾಗದಂತಾಗಿದೆ.

ಇನ್ನೂ ಸಾವಿರಾರು ಕೋಟಿಯನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿದ್ದರೆ ಅದೆಷ್ಟೋ ಉಪಯೋಗಕರ ಕಾರ್ಯವನ್ನು ಮಾಡಬಹುದಿತ್ತು. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಾವಿರಾರು ಕೋಟಿ ಖರ್ಚು ಮಾಡಿದರೂ, ಸಾಸಿವೆಯಷ್ಟು ಉಪಯೋಗವಾಗದೇ ಇರುವುದು ನಿಜಕ್ಕೂ ಏನಿದು ವ್ಯವಸ್ಥೆ ಎಂದು ಅಣಕಿಸುವಂತಾಗಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/03/2026 12:54 pm

Cinque Terre

24.21 K

Cinque Terre

0

ಸಂಬಂಧಿತ ಸುದ್ದಿ