ಕುಂದಗೋಳ : ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳ ಬೇಜವಾಬ್ದಾರಿ ಫಲವಾಗಿ ಬರೋಬ್ಬರಿ 40 ಲಕ್ಷ ರೂಪಾಯಿ ಹಣ ಬಳಕೆಯಾಗದೆ ಖಾತೆಯಲ್ಲೇ ಉಳಿದ ಘಟನೆ ಕುಂದಗೋಳದಲ್ಲಿ ನಡೆದಿದೆ.
ಎಸ್.! ವೀಕ್ಷಕರೇ ಕುಂದಗೋಳ ತಾಲೂಕು ಪಂಚಾಯಿತಿಗೆ 2024-25ನೇ ಸಾಲಿನಲ್ಲಿ ಸರ್ಕಾರ 1.68.98.356 ರೂಪಾಯಿ ಅನಿರ್ಬಂಧಿತ ಅನುದಾನ ನೀಡಿತ್ತು.
ಈ ಹಣವನ್ನು 2024-25ರ ಆರ್ಥಿಕ ವರ್ಷ ಮಾರ್ಚ್ ತಿಂಗಳು ಮುಕ್ತಾಯಕ್ಕೂ ಮುನ್ನ ಬಳಸುವ ಉದ್ದೇಶದಿಂದ ಅಂದಿನ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಕೆ.ಆರ್.ಐ.ಡಿ.ಎಲ್'ಗೆ ಖಾತೆಗೆ ಹಣ ವರ್ಗಾಯಿಸಿ ಕ್ರಿಯಾ ಯೋಜನೆ ಸಲ್ಲಿಸಿದ್ದರು.
ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಾಮಗ್ರಿ ಪೂರೈಕೆ ಬರುವುದಿಲ್ಲ ಎಂಬುದನ್ನೂ ಗಮನಿಸದೇ ಬರೋಬ್ಬರಿ 40 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಪಡೆದು 2026 ಮಾರ್ಚ್ ತಿಂಗಳು ಮತ್ತೊಂದು ಆರ್ಥಿಕ ವರ್ಷ ಮುಕ್ತಾಯದ ಅವಧಿಯಲ್ಲಿ ತಾಲೂಕು ಪಂಚಾಯಿತಿಗೆ ಹಣ ಹಿಂದಿರುಗಿಸಲು ಮುಂದಾಗಿದ್ದಾರೆ .
ಈ ನಿರ್ಧಾರದಿಂದ ಕೋಪಿತರಾದ ಶಾಸಕ ಎಂ.ಆರ್.ಪಾಟೀಲ್ ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ನಡೆಸಿದ್ದಾರೆ. ಮುಖ್ಯವಾಗಿ ಕೆ.ಆರ್.ಐ.ಡಿ.ಎಲ್ ಹಿಂದಿರುಗಿಸಲು ಮುಂದಾದ 40 ಲಕ್ಷ ಹಣ ಯಾವ ಖಾತೆಗೆ ಪಡೆಯಬೇಕು ? ಎಂಬುದು ಪ್ರಸ್ತುತ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ತರುಕಾಣೆ ಅವರಿಗೂ ಸವಾಲಿನ ಕೆಲಸವಾಗಿದೆ.
ಒಟ್ಟಾರೆ ಸರ್ಕಾರ ಅಭಿವೃದ್ಧಿಗಾಗಿ ನೀಡಿದ ಕೋಟಿ ಕೋಟಿ ಅನುದಾನ ಬಳಕೆ ತಿಳಿಯದ ಇಓ ಜಗದೀಶ್ ಕಮ್ಮಾರ್ ಅವರಿಗೆ ಕಾರ್ಯ ವ್ಯಾಪ್ತಿ ತಿಳಿಯದೇ ಹಣ ಪಡೆದ ಕೆ.ಆರ್.ಐ.ಡಿ.ಎಲ್ ಅಧಿಕಾರಿ ಪ್ರತಿಭಾ ಅವರಿಗೆ ತಕ್ಕ ಶಾಸ್ತಿ ಮಾಡುವಂತೆ ಕೆ.ಡಿ.ಪಿ ಸಭೆ ಸದಸ್ಯರು ಆಗ್ರಹಿಸಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 06:33 pm
LOADING...