ಕುಂದಗೋಳ : ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.75% ಪ್ರತಿಶತ ಸಾಧನೆ ಮಾಡಿದ ಕುಂದಗೋಳ ತಾಲೂಕಿನ ವಿದ್ಯಾರ್ಥಿಗಳನ್ನು ಈ ಬಾರಿ 95% ಪ್ರತಿಶತದಿಂದ 100% ಪ್ರತಿಶತದವರೆಗೆ ಸಾಧನೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಹೇಳಿದರು.
ಅವರು ಎಸ್.ಎಸ್.ಎಲ್.ಸಿ ಪರೀಕ್ಷಾ ವಿಷಯವಾಗಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ 2025-26ನೇ ಸಾಲಿನಲ್ಲಿ 2066 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಿದ್ದು, ಅವರಲ್ಲಿ 1960 ವಿದ್ಯಾರ್ಥಿಗಳು ಮೊದಲ ವಿಷಯದ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದರು.
ಬಾಕಿ ಉಳಿದ ವಿದ್ಯಾರ್ಥಿಗಳಲ್ಲಿ ಕೆಲವರು ಶಾಲೆ ಹಾಜರಾತಿ ಶೇ.75% ಪ್ರತಿಶತಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅನುಮತಿಯ ಹಾಲ್ ಟಿಕೆಟ್ ನೀಡಲಾಗಿಲ್ಲ ಎಂದರು.
ಈಗಾಗಲೇ ಮಿಷನ್ 40+ ಮತ್ತು 50+ ಮೂಲಕ ವಿದ್ಯಾರ್ಥಿಗಳಿಗೆ ಸಮರ್ಪಕ ಪರೀಕ್ಷಾ ತಯಾರಿ ನಡೆಸಿದ್ದೇವೆ, ಈ ಬಾರಿ 95% ಪ್ರತಿಶತದಿಂದ 100% ಪ್ರತಿಶತ ಸಾಧನೆ ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ
ಮಾಡಲಗೇರಿ ಹೇಳಿದರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
20/03/2026 07:37 pm
LOADING...