ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಹಕಾರ ಇಲಾಖೆಯ ಎಫ್‌ಡಿಸಿ ಮಧುಸೂಧನ್ ಅಮಾನತ್ತು

ಧಾರವಾಡ: ಧಾರವಾಡದ ಸಹಕಾರ ಇಲಾಖೆಯಲ್ಲಿ ಎಫ್‌ಡಿಸಿಯಾಗಿ ಕೆಲಸ ಮಾಡುತ್ತಿದ್ದ ಎಫ್‌ಡಿಸಿ ಪಿ.ಮಧುಸೂಧನ್ ಅವರನ್ನು ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ.ಕುಮಾರ್ ಅವರು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಧಾರವಾಡದ ಸಹಕಾರ ಇಲಾಖೆ ಎಫ್‌ಡಿಸಿ ಕೆಲಸ ಮಾಡುತ್ತಿದ್ದ ಮಧುಸೂಧನ್, ಫೈನಾನ್ಸ್ ನೋಂದಣಿ ಮಾಡಿಸಿಕೊಡಬೇಕು ಎಂದಾದರೆ ಹಣ ನೀಡಬೇಕು ಎಂದು ಸಾರ್ವಜನಿಕರೊಬ್ಬರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೇ ಆತ ಲಂಚ ಪಡೆಯುವ ವೀಡಿಯೋ ಸಹ ವೈರಲ್ ಆಗಿತ್ತು. ಈ ಸಂಬಂಧ ಪಬ್ಲಿಕ್ ನೆಕ್ಸ್ಟ್ ವೀಡಿಯೋ ಸಮೇತ ಸುದ್ದಿ ಸಹ ಪ್ರಸಾರ ಮಾಡಿತ್ತು. ಈ ವರದಿ ಬೆನ್ನಲ್ಲೇ ಎಚ್ಚೆತ್ತ ಸಹಕಾರ ಸಂಘಗಳ ನಿಬಂಧಕರು ಮಧುಸೂಧನ್ ಅವರನ್ನು ಸೇವೆಯಿಂದಲೇ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಧುಸೂಧನ್ ಫೈನಾನ್ಸ್ ನೋಂದಣಿ ಮಾಡಿಸಲು 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಗೊತ್ತಾಗಿದೆ. ಮಾರ್ಚ್ ಮುಗಿದ ಮೇಲೆ ನೋಂದಣಿ ಮಾಡಿಸಿದರೆ ಹಣ ಉಳಿಯಲಿದೆ ಎಂದು ಸಾರ್ವಜನಿಕರಿಗೆ ಹೇಳಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿ ತಾನೇ ಲಂಚ ಪಡೆದು ಸಾರ್ವಜನಿಕರ ಕೆಲಸ ಮಾಡಿ ಕೊಡುತ್ತಿದ್ದ. 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಈತ ಮೊದಲಿಗೆ ಸಾರ್ವಜನಿಕರೊಬ್ಬರಿಂದ 3 ಸಾವಿರ ಹಣ ಪಡೆಯುತ್ತಿದ್ದ ವೀಡಿಯೋ ವೈರಲ್ ಆಗಿತ್ತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 05:25 pm

Cinque Terre

17.16 K

Cinque Terre

0

ಸಂಬಂಧಿತ ಸುದ್ದಿ