ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನೌಕರರಿಗೆ 7 ತಿಂಗಳ ಸಂಬಳ ಪಂಗನಾಮ ! ಸ್ವಾಮಿ ಎಜುಕೇಷನ್ ಸೊಸೈಟಿ ಗೋಲ್‌ಮಾಲ್

ಕುಂದಗೋಳ : ಸರ್ಕಾರಿ ಕಚೇರಿಗೆ ಹೊರಗುತ್ತಿಗೆ ಆಧಾರದ ಮೇಲೆ 3 ಜನ ನೌಕರರನ್ನು ಕೆಲಸಕ್ಕೆ ನೇಮಿಸಿದ ಸ್ವಾಮಿ ಎಜುಕೇಷನ್ ಸೊಸೈಟಿ 7 ತಿಂಗಳ ವೇತನ ನೀಡದೆ ಪಂಗನಾಮ ಹಾಕಿದೆ.

ಕುಂದಗೋಳದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗಕ್ಕೆ 2024 ಏಪ್ರಿಲ್ ತಿಂಗಳಿನಿಂದ ಸೇವೆ ಸಲ್ಲಿಸಿದ 3 ಜನ ನೌಕರರ ಟೆಂಡರ್ ಪಡೆದ ಸ್ವಾಮಿ ಎಜುಕೇಷನ್ ಸೊಸೈಟಿ 7 ತಿಂಗಳ ಸಂಬಳ ನೀಡಿಲ್ಲ. ಮುಖ್ಯವಾಗಿ ಬಾಕಿ ತಿಂಗಳ ಸಂಬಳವನ್ನೂ ಬ್ಯಾಂಕ್ ಖಾತೆಗೆ ಹಾಕದೇ ಫೋನ್ ಪೇ ಮೂಲಕ ಪಾವತಿ ಮಾಡಿದ್ದು, ನೌಕರರಿಗೆ ಇ.ಎಸ್.ಐ/ಪಿ.ಎಫ್ / ಸ್ಯಾಲರಿ ಸ್ಲಿಪ್ ಸಹ ಕೊಟ್ಟಿಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ನಿರೀಕ್ಷಕರ ಮೂಲಕ ಕಾರ್ಮಿಕ ಇಲಾಖೆ ಕೋರ್ಟ್‌ಗೆ ಪ್ರಕರಣ ದಾಖಲಾದರೂ ಪರಿಹಾರ ಮಾತ್ರ ಶೂನ್ಯವಾಗಿದೆ.

ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ಇಲಾಖೆ ಎಇಇ ಸಿದ್ದಪ್ಪ.ಟಿ ಅವರಿಗೆ ನೌಕರರು ಮನವಿ ಸಲ್ಲಿಸಿದ್ದರೂ ವಿಷಯ ನಮಗೆ ಗೊತ್ತೇ ಇಲ್ಲ ಎಂಬಂತೆ ಅಧಿಕಾರಿಗಳು ಉದಾಸೀನತೆ ತೋರಿದ್ದಾರೆ.

ಜಿಲ್ಲಾ ಪಂಚಾಯತ್ ರಾಜ್ ಇಲಾಖೆ, ಎಇಇ

ಒಟ್ಟಾರೆ ಸ್ವಾಮಿ ಎಜುಕೇಷನ್ ಸೊಸೈಟಿ ವಿರುದ್ಧ ನೌಕರರ ಅಪಸ್ವರ ಕೇಳಿ ಬಂದರೂ, 7 ತಿಂಗಳ ಬಾಕಿ ವೇತನ ನೀಡದೆ ಇದ್ದರೂ, ಪ್ರಸ್ತುತ ವರ್ಷ 2026 ರಲ್ಲೂ ಸಂಬಳ ನೀಡದ ಸ್ವಾಮಿ ಎಜುಕೇಷನ್ ಸೊಸೈಟಿಗೆ ಮರು ಟೆಂಡರ್ ಆಗಿರೋದು ವಿಪರ್ಯಾಸಕರ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 12:59 pm

Cinque Terre

23.21 K

Cinque Terre

0

ಸಂಬಂಧಿತ ಸುದ್ದಿ