ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದರೂ ಫುಟ್‌ಪಾತ್‌ಗಳೇ ಕಾಣುವುದಿಲ್ಲ. ಏಕೆಂದರೆ ಫುಟ್‌ಪಾತ್‌ಗಳು ಅಂಗಡಿಕಾರರ, ವ್ಯಾಪಾರಸ್ಥರ ವಹಿವಾಟು ಸ್ಥಳಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣದಿಂದ ಪಾದಚಾರಿಗಳ ಸುಗಮ ಸಂಚಾರಕ್ಕೆ ಕಂಟಕ ಎದುರಾಗಿದ್ದು, ಪಾದಚಾರಿಗಳ ಸಂಚಾರಕ್ಕಿಂತ ಸಣ್ಣಪುಟ್ಟ ವ್ಯಾಪಾರ, ಅಂಗಡಿಕಾರರ ನಾಮಫಲಕ ಹಾಗೂ ವಾಹನ ನಿಲುಗಡೆಗೆ ಇವುಗಳ ಬಳಕೆಯಾಗುತ್ತಿದೆ. ಹೀಗಾಗಿ ವಾಹನಗಳ ಸಂಚಾರ ದಟ್ಟಣೆಯ ಮಧ್ಯೆಯೇ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವಂತಾಗಿದೆ. ನಗರದ ಪ್ರಮುಖ ರಸ್ತೆ, ಮಾರುಕಟ್ಟೆಯ ರಸ್ತೆ ಹಾಗೂ ಒಳ ರಸ್ತೆಯ ಅಕ್ಕಪಕ್ಕದಲ್ಲಿ ಫುಟ್‌ಪಾತ್ ಗಳಿವೆ. ಆದರೆ, ಅವುಗಳ ಸದ್ಬಳಕೆ ಆಗುತ್ತಿಲ್ಲ. ಹೆಚ್ಚು ಜನಸಂದಣಿ ಹಾಗೂ ವಾಹನಗಳ ಸಂಚಾರ ಇರುವ ಪ್ರಮುಖ ಸ್ಥಳಗಳಲ್ಲಿಯೇ ಬಹುತೇಕ ಅಂಗಡಿಕಾರರು ಫುಟ್‌ಪಾತ್ ಅತಿಕ್ರಮಿಸಿದ್ದಾರೆ. ಒಂದೆಡೆ ಬೀದಿ ಬದಿ ವ್ಯಾಪಾರಸ್ಥರು, ಇನ್ನೊಂದೆಡೆ ಫುಟ್‌ಪಾತ್ ದಲ್ಲಿಯೇ ನಾಮಫಲಕ, ಅಂಗಡಿಯ ಇತರೆ ಸಾಮಗ್ರಿ ಇಡುವುದು ಸಾಮಾನ್ಯವಾಗಿದೆ.
ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್ ಜಾಗಗಳಲ್ಲೂ ವ್ಯಾಪಾರ ನಡೆಯುವುದರಿಂದ ಅರ್ಧಕ್ಕಿಂತ ಹೆಚ್ಚು ಜಾಗ ಅತಿಕ್ರಮಣವಾಗುತ್ತಿದೆ. ಸಮಸ್ಯೆ ಬಹಳ ವರ್ಷಗಳಿಂದ ಇದ್ದರೂ, ಸೂಕ್ತ ಪರಿಹಾರ ಕಂಡುಕೊಳ್ಳಲು ಪಾಲಿಕೆ ವಿಫಲವಾಗಿದೆ. ಈ ಬಗ್ಗೆ ಸಾರ್ವಜನಿಕರು ಹೋರಾಟ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
Kshetra Samachara
20/03/2026 06:23 pm
LOADING...