ಧಾರವಾಡ: ಇಂದಿನ ಯುವ ಸಮೂಹಕ್ಕೆ ಬರೀ ಶಿಕ್ಷಣ ನೀಡಿದರೆ ಸಾಲದು, ಸಂಸ್ಕೃತಿ-ಸಂಸ್ಕಾರವನ್ನೂ ನೀಡುವ ಅಗತ್ಯವಿದೆ ಎಂದು ಧಾರವಾಡ ಜರ್ನಲಿಸ್ಟ ಗಿಲ್ಡ್ ಅಧ್ಯಕ್ಷ ಡಾ.ಬಸವರಾಜ ಹೊಂಗಲ್ ಹೇಳಿದರು.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ವಿಶ್ವಗುರು ಬಸವಣ್ಣನವರ ವೇದಿಕೆಯಲ್ಲಿ ಶ್ರೀ ಗುರು ವಿರುಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದಿರುವ ಲವಣಗಿರಿ ಉತ್ಸವದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ಬರೀ ಶಿಕ್ಷಣ ನೀಡಲು ಮುಂದಾಗುತ್ತಿದ್ದು, ಇದರಿಂದ ಮಕ್ಕಳು ಉನ್ನತಿ ಸಾಧಿಸಬಹುದು. ಆದರೆ, ಸಂಸ್ಕಾರವಿಲ್ಲದೇ ಏನೂ ಪ್ರಯೋಜನವಿಲ್ಲ. ಇಂತಹವರಿಂದ ಸಮಾಜಕ್ಕಷ್ಟೇ ಅಲ್ಲ, ಹೆತ್ತು-ಹೊತ್ತ ಸಲುಹಿಸಿದ ಪೋಷಕರಿಗೂ ಪ್ರತಿಫಲ ಸಿಗದು. ಹೀಗಾಗಿ ಸಮಾಜದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಏರುತ್ತಿದ್ದು, ಹೀಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ನಮ್ಮ ಪರಂಪರೆ ಸಂಸ್ಕೃತಿಯ ಅರಿವು ನೀಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಲ್ಲೂರಿನ ಆರೂಢಾಶ್ರಮದ ಮಾತೋಶ್ರೀ ಲಲಿತಮ್ಮನವರು ಸಾನಿಧ್ಯ ವಹಿಸಿದ್ದರು. ಮೂರು ಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಇದ್ದರು. ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಣ್ಣ ಅಷ್ಟಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಡಾ.ಬಸವರಾಜ ಹೊಂಗಲ್, ನಿಜಗುಣಿ ದಿಂಡಲಕೊಪ್ಪ, ಶಶಿಧರ ಬುದ್ನಿ, ಪರಮೇಶ್ವರ ಅಂಗಡಿ, ಪ್ರವೀಣ ಓಂಕಾರಿ, ಮಂಜು ಗಿರಿಯಾಲ, ಶಿವಪ್ರಭು ಈಸರಗೊಂಡ, ಚನ್ನಬಸಪ್ಪ ಲಗಮಣ್ಣವರ, ಶ್ರೀಶೈಲ ಗೌರಿಮಠ, ರಮೇಶ ಓರಣಕರ ಸೇರಿದಂತೆ ಹನುಮನಹಾಳ, ಲೋಕೂರ, ನನಗುಂಡಿಕೊಪ್ಪ, ಉಪ್ಪಿನಬೆಟಗೇರಿ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.
Kshetra Samachara
18/03/2026 09:42 pm
LOADING...