ಬೆಂಗಳೂರು: ಇಂದು ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಶಿವಾಜಿನಗರ ವ್ಯಾಪ್ತಿಯಲ್ಲಿ ಬರೋ ಬೆನ್ಸನ್ ಟೌನ್ ನ ಮಿಲ್ಲರ್ಸ್ ರಸ್ತೆಯಲ್ಲಿರೋ 'ಮಸ್ಜಿದ್ ಇ-ಖಾದ್ರಿಯಾದಲ್ಲಿ ಏರ್ಪಡಿಸಲಾಗಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಅವರು ಪಾಲ್ಗೊಂಡು ಶುಭ ಕೋರಿದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಸಿಎಂಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ಮಸೀದಿಗೆ ಆಗಮಿಸಿದ ಸಿಎಂ ಅವರಿಗೆ ಮಸೀದಿಯ ಧರ್ಮಗುರುಗಳು ಮತ್ತು ಮುಖಂಡರು ಮಕ್ಮಲ್ ಟೋಪಿ ತೊಡಿಸಿ ಹೂ ಗುಚ್ಛವನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
PublicNext
21/03/2026 11:25 am
LOADING...