ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಜೆಪಿ ತೋರಿಸಿದರೆ ಸಾಕು ಮುಸ್ಲಿಮರು ಬಾಲ ಮುದುರಿಕೊಂಡು ಕಾಂಗ್ರೆಸ್ ಗೆ ಓಟ್ ಹಾಕುತ್ತಾರೆ!

ಬೆಂಗಳೂರು : ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ತನ್ನ ಅಭ್ಯರ್ಥಿ ಯಾರು ಅಂತಾ ಈಗಾಗಲೇ ಬಹಿರಂಗಪಡಿಸಿಯಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ತನ್ನ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸುವಲ್ಲಿ ಹಿಂದೇಟು ಹಾಕುತ್ತಿದೆ. ಈ ಬಾರಿ ದಾವಣಗೆರೆಯಲ್ಲಿ ಮುಸ್ಲಿಮರು ನಮಗೇ ಟಿಕೆಟ್ ಬೇಕೆಂದು ಹಠ ಹಿಡಿದಿರೋದೇ ಕಾರಣವಾಗಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರೆಂದರೆ ತನ್ನ ಗುಲಾಮರೆಂದು ಭಾವಿಸಿದೆ. ಹೀಗಂತ ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.

ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ತೋರಿಸಿದರೆ ಸಾಕು ಕಾಂಗ್ರೆಸ್ ನವರು ಬಾಲ ಮುದುರಿಕೊಂಡು ಬಂದು ಕಾಂಗ್ರೆಸ್ ಗೆ ಓಟ್ ಹಾಕುತ್ತಾರೆ ಎಂಬ ಭಾವನೆ ಹೊಂದಿದ್ದಾರೆಂದು ಕಿಡಿ ಹೊತ್ತಿಸಿದರು.

Edited By :
PublicNext

PublicNext

21/03/2026 08:00 pm

Cinque Terre

7.02 K

Cinque Terre

0