ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಕಬಿನಿ ಸೊಬಗು ಕಣ್ತುಂಬಿಕೊಂಡ ವನ್ಯಜೀವಿ ಪ್ರಿಯರು

ಮೈಸೂರು: ಪ್ರಕೃತಿಯ ಮಡಿಲು, ವನ್ಯಜೀವಿಗಳ ತಾಣವಾಗಿರುವ ನಾಗರಹೊಳೆ ಅಭಯಾರಣ್ಯದ ಕಬಿನಿ ಕಾಡಿನಲ್ಲಿ ಈಗ ಹುಲಿ ಮರಿಗಳ ಕಲರವ ಜೋರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಡು ತಂಪಾಗಿದ್ದು, ಮಣ್ಣಿನ ಸುವಾಸನೆಗೆ ಮಾರುಹೋದ ಪುಟ್ಟ ಹುಲಿ ಮರಿಗಳು ತಮ್ಮ ತಾಯಿಯೊಂದಿಗೆ ರಸ್ತೆಗೆ ಇಳಿದು ಮೈಮರೆತಿವೆ.

ಸಫಾರಿ ಮಾರ್ಗದಲ್ಲೇ ತನ್ನ ಮರಿಗಳೊಂದಿಗೆ ರಾಜಗಾಂಭೀರ್ಯದಿಂದ ಕುಳಿತಿದ್ದ ತಾಯಿ ಹುಲಿ ಮತ್ತು ಅದರ ಸುತ್ತಲೂ ತುಂಟಾಟ ನಡೆಸುತ್ತಿದ್ದ ಮರಿಗಳ ಮನಮೋಹಕ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಿನ ಮಣ್ಣಿನ ಘಮಲನ್ನು ಸವಿಯುತ್ತಾ ಪ್ರಕೃತಿಯ ಸೊಬಗನ್ನು ಆನಂದಿಸುತ್ತಿದ್ದ ಈ ಅಪರೂಪದ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕಬಿನಿಯ ಈ ಅಪ್ರತಿಮ ವನ್ಯಜೀವಿ ಸೌಂದರ್ಯವನ್ನು ಕಣ್ತುಂಬಿಕೊಂಡ ವನ್ಯಜೀವಿ ಪ್ರಿಯರು ಫುಲ್ ಖುಷ್ ಆಗಿದ್ದಾರೆ.

Edited By :
PublicNext

PublicNext

21/03/2026 12:19 pm

Cinque Terre

6.11 K

Cinque Terre

0

ಸಂಬಂಧಿತ ಸುದ್ದಿ